ಜಕಾರ್ತ: ಭಾರತದ ಶೂಟರ್ ಲಕ್ಷ್ಯ ಶೆರ್ಯೊನ್ ಅವರು ಏಶ್ಯನ್ ಗೇಮ್ಸ್ ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.
ಈ ಪದಕದೊಂದಿಗೆ ಭಾರತ ಒಂದು ಸ್ವರ್ಣ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ತನ್ನದಾಗಿಸಿಕೊಂಡಿದೆ.
ಲಕ್ಷ್ಯ ಅವರು ಫೈನಲಿನಲ್ಲಿ 45ರಲ್ಲಿ 39 ಅಂಕ ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಇದೇ ವಿಭಾಗದಲ್ಲಿದ್ದ ಭಾರತದ ಮತ್ತೊಬ್ಬ ಶೂಟರ್ ಮನವ್ಜಿತ್ ಸಿಂಗ್ ಸಂಧು ಪದಕ ಗೆಲ್ಲಲು ವಿಫಲರಾದರು.
10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಅವರು ಬೆಳ್ಳಿ ಪದಕ ತನ್ನದಾಗಿಸಿಕೊಂಡರು.