News Kannada
Saturday, October 01 2022

ಕ್ರೀಡೆ

19ರ ಕೆಳಹರೆಯದ ಏಶ್ಯಾ ಕಪ್: ಯುಎಇ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು - 1 min read

Photo Credit :

19ರ ಕೆಳಹರೆಯದ ಏಶ್ಯಾ ಕಪ್: ಯುಎಇ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಸಾವರ್(ಬಾಂಗ್ಲಾದೇಶ): ಇಲ್ಲಿ ನಡೆಯುತ್ತಿರುವ 19ರ ಕೆಳಹರೆಯದ ಏಶ್ಯಾಕಪ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಭಾರತ 227 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಆರಂಭಿಕರಾಗಿರುವ ಅನುಜ್ ರಾವತ್ ಮತ್ತು ದೇವದತ್ತ್ ಪಡಿಕ್ಕಲ್ ಅವರು ಶತಕ ಬಾರಿಸಿದ ಬಳಿಕ ಸ್ಪಿನ್ನರ್ ಸಿದ್ಧಾರ್ಥ ದೇಸಾಯಿ ಆರು ವಿಕೆಟ್ ಕಬಳಿಸಿ ಯುಎಇ ಬ್ಯಾಟಿಂಗ್ ನ ನಡುಮುರಿದರು.

ರಾವತ್ ಮತ್ತು ಪಡಿಕ್ಕಲ್ ಮೊದಲ ವಿಕೆಟಿಗೆ 205 ರನ್ ಜತೆಯಾಟ ನಡೆಸಿದರು. ಪಡಿಕ್ಕಲ್ 115 ಎಸೆತಗಳಲ್ಲಿ 121 ರನ್ ಮತ್ತು ರಾವತ್ 115 ಎಸೆತಗಳಲ್ಲಿ 102 ಬಾರಿಸಿದರು. ಕಪ್ತಾನ ಪವನ್ ಶಾ(45), ಸಮೀರ್ ಚೌಧರಿ 42 ರನ್ ಬಾರಿಸಿ ತಂಡ 354 ರನ್ ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.

ಇದಕ್ಕೆ ಉತ್ತರಿಸಿದ ಯುಎಇ ಉತ್ತಮ ಆಟದ ಪ್ರದರ್ಶನ ನೀಡಲು ವಿಫಲವಾಯಿತು. ಎಡಗೈ ಸ್ಪಿನ್ನರ್ ದೇಸಾಯಿ ಆರು ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

See also  ಹೆಣ್ಣು ಮಗು ಜನನದ ಸಂಭ್ರಮ: ರೋಹಿತ್ ಶರ್ಮಾ ತವರಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು