News Kannada
Wednesday, October 05 2022

ಕ್ರೀಡೆ

ನಾಳೆ ಹಾಕಿ ವಿಶ್ವಕಪ್ ಕ್ವಾರ್ಟರ್ ಫೈನಲಿನಲ್ಲಿ ಭಾರತದ ಎದುರಾಳಿ ನೆದರ್ಲೆಂಡ್ - 1 min read

Photo Credit :

ನಾಳೆ ಹಾಕಿ ವಿಶ್ವಕಪ್ ಕ್ವಾರ್ಟರ್ ಫೈನಲಿನಲ್ಲಿ ಭಾರತದ ಎದುರಾಳಿ ನೆದರ್ಲೆಂಡ್

ನವದೆಹಲಿ: ಹಾಕಿ ವಿಶ್ವಕಪ್ ನ ಫೈನಲಿಗೇರಿ ಟ್ರೋಫಿಗೆ ಮುತ್ತಿಕ್ಕಬೇಕು ಎನ್ನುವ ಭಾರತದ ಕನಸಿಗೆ ಕ್ವಾರ್ಟರ್ ಫೈನಲಿನಲ್ಲಿ ಬಲಿಷ್ಠ ನೆದರ್ಲೆಂಡ್ ತಡೆಯಾಗುವ ಸಾಧ್ಯತೆಗಳು ಕಾಣಿಸುತ್ತಿದೆ.

1975ರಲ್ಲಿ ಭಾರತ ಹಾಕಿ ವಿಶ್ವಕಪ್ ನ ಸೆಮಿಫೈನಲಿನಲ್ಲಿ ಆಡಿತ್ತು. ಈ ವಿಶ್ವಕಪ್ ನಲ್ಲೇ ಭಾರತ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಆದರೆ ಇದರ ಬಳಿಕ ಭಾರತಕ್ಕೆ ಹಾಕಿ ವಿಶ್ವಕಪ್ ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲೇ ಇಲ್ಲ.

ಕ್ವಾರ್ಟರ್ ಫೈನಲಿನಲ್ಲಿ ಮತ್ತೊಂದು ರೀತಿಯ ಭೀತಿಯೆಂದರೆ ಇದುವರೆಗೆ ವಿಶ್ವಕಪ್ ನಲ್ಲಿ ನೆದರ್ಲೆಂಡ್ ತಂಡವನ್ನು ಭಾರತವು ಸೋಲಿಸಿಲ್ಲ. ಇದಕ್ಕೆ ಮೊದಲು ನೆದರ್ಲೆಂಡ್ ಐದು ಸಲ ಭಾರತವನ್ನು ಸೋಲಿಸಿದೆ ಮತ್ತು ಒಂದು ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ.

ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನ್ ಪ್ರೀತ್ ಸಿಂಗ್ ಬಳಗ ವಿಶ್ವಕಪ್ ನಲ್ಲಿ ನೆದರ್ಲೆಂಡ್ ತಂಡವನ್ನು ಮಣಿಸಿ ಹೊಸ ಇತಿಹಾಸ ಬರೆಯಲು ಬಯಸಿದ್ದಾರೆ. ವಿಶ್ವ ರ‍್ಯಾಂಕಿಂಗ್ ನಲ್ಲಿ ನೆದರ್ಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದರೆ ಭಾರತ ಐದನೇ ಸ್ಥಾನದಲ್ಲಿದೆ.

ಕಳೆದ ಸಲ ಭಾರತ ಮತ್ತು ನೆದರ್ಲೆಂಡ್ ಪರಸ್ಪರ ಎದುರಾಗಿದ್ದಾಗ ಪಂದ್ಯವು 1-1ರ ಡ್ರಾದಲ್ಲಿ ಅಂತ್ಯಕಂಡಿತ್ತು.

See also  ಧೋನಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು