ಬ್ರಿಡ್ಜ್ ಟೌನ್: ವೇಗಿ ಕೇಮರ್ ರೋಚ್ 17 ರನ್ ಗಳಿಗೆ ಐದು ವಿಕೆಟ್ ಉರುಳಿಸಿ ಇಂಗ್ಲೆಂಡ್ ನ್ನು ಕೇವಲ 77ರನ್ ಗಳಿಗೆ ಆಲೌಟ್ ಮಾಡಲು ನೆರವಾಗಿದ್ದಾರೆ.
ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ 30 ರನ್ ಗಳಿಗೆ ಒಂದು ವಿಕೆಟ್ ಕಳಕೊಂಡಿದ್ದ ಇಂಗ್ಲೆಂಡ್ ಬಳಿಕ ಕೇವಲ 77 ರನ್ ಗಳಿಗೆ ಗಂಟು ಮೂಟೆ ಕಟ್ಟಿಕೊಂಡಿತು.
ಮೊದಲ ಇನ್ನಿಂಗ್ಸ್ ನಲ್ಲಿ 289 ರನ್ ಮಾಡಿದ್ದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 127 ರನ್ ಮಾಡಿ ಒಟ್ಟು 212 ರನ್ ಗಳ ಮುನ್ನಡೆಯಲ್ಲಿದೆ.