ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಬಾರಿಸಿದ ಸ್ಫೋಟಕ ಶತಕದಿಂದ ಆಸ್ಟ್ರೇಲಿಯಾ ಮೊದಲ ಸಲ ಭಾರತ ವಿರುದ್ಧ ಟಿ-20 ಸರಣಿ ಗೆದ್ದುಕೊಂಡಿದೆ.
ಮ್ಯಾಕ್ಸ್ ವೆಲ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, 55 ಎಸೆತಗಳಲ್ಲಿ 113 ರನ್ ಮಾಡಿದರು. ಇದರಲ್ಲಿ 9 ಸಿಕ್ಸರ್ ಗಳಿತ್ತು. 191 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಆಸ್ಟ್ರೇಲಿಯಾ ಏಳು ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು.
ಇದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ವಿಕೆಟಿಗೆ 100 ರನ್ ಜತೆಯಾಟ ನಡೆಸಿ ತಂಡ ನಾಲ್ಕು ವಿಕೆಟಿಗೆ 190 ರನ್ ಪೇರಿಸಲು ನೆರವಾದರು.
ಇದೇ ಮೊದಲ ಸಲ ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಪರಾಭವಗೊಳಿಸಿದೆ. ನಾಯಕ ಕೊಹ್ಲಿ 38 ಎಸೆತಗಳಲ್ಲಿ ಅಜೇಯ 72 ರನ್ ಬಾರಿಸಿದರು. ಧೋನಿ ಕೇವಲ 23 ಎಸೆತಗಳನ್ನು ಎದುರಿಸಿ 40 ರನ್ ಸಿಡಿಸಿದರು.