ಸೌತ್ ಹ್ಯಾಂಪ್ಟನ್: ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ವಿಶ್ವಕಪ್ ನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾವನ್ನು ಕೇವಲ 227 ರನ್ ಗಳಿಗೆ ಕಟ್ಟಿಹಾಕಿತು. ಇದರ ಬಳಿಕ ರೋಹಿತ್ ಅಜೇಯ 122 ರನ್ ನೆರವಿನಿಂದ 47.3 ಓವರ್ ಗಳಲ್ಲಿ ಗೆಲುವು ದಾಖಲಿಸಿಕೊಂಡಿತು.
ಚಹಲ್ 4, ಬುಮ್ರಾ 2 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ಧವನ್ ವಿಕೆಟ್ ಬೇಗನೆ ಕಳಕೊಂಡಿತು. ಕೊಹ್ಲಿ 18 ರನ್ ಮಾಡಿ ನಿರ್ಗಮಿಸಿದರು. ಆದರೆ ಇದರ ಬಳಿಕ ರೋಹಿತ್ ದ. ಆಫ್ರಿಕಾದ ಬೌಲರ್ ಗಳನ್ನು ಬೆಂಡೆತ್ತಿ 22ನೇ ಶತಕ ಭಾರಿಸಿ ಗೆಲುವು ತಂದುಕೊಟ್ಟರು.