ಓವಲ್: ನ್ಯೂಜಿಲೆಂಡ್ ವಿಶ್ವಕಪ್ ನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ವಿಕೆಟ್ ಗೆಲುವು ದಾಖಲಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
245 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ನ್ಯೂಜಿಲೆಂಡ್ ಗೆ ರಾಸ್ ಟೇಲರ್ 82 ರನ್ ಬಾರಿಸಿ ನೆರವು ನೀಡಿದರು.
ಬಾಂಗ್ಲಾದೇಶದ ಬೌಲರ್ ಗಳು ವಿಕೆಟ್ ಉರುಳಿಸುತ್ತಾ ಗೆಲುವಿನ ಆಸೆ ಮೂಡಿಸಿದರೂ ಅಂತ್ಯದಲ್ಲಿ ಮೈಕಲ್ ಸ್ಯಾಂಟರ್(17) ಮತ್ತು ಮ್ಯಾಟ್ ಹೆನ್ರಿ(6) ಬಾಂಗ್ಲಾದ ಆಸೆಗೆ ತಣ್ಣೀರೆರಚಿದರು.