News Kannada
Monday, November 28 2022

ಕ್ರೀಡೆ

ಶರ್ಮಾ ಶತಕದ ಅಬ್ಬರ: ಟೀಂ ಇಂಡಿಯಾ ಸೆಮಿಫೈನಲಿಗೆ - 1 min read

Photo Credit :

ಶರ್ಮಾ ಶತಕದ ಅಬ್ಬರ: ಟೀಂ ಇಂಡಿಯಾ ಸೆಮಿಫೈನಲಿಗೆ

ಬರ್ಮಿಂಗ್ ಹ್ಯಾಮ್: ರೋಹಿತ್ ಶರ್ಮಾ ಭರ್ಜರಿ ಶತಕ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಯಿಂದ ಬಾಂಗ್ಲಾದೇಶವನ್ನು 28 ರನ್ ಗಳಿಂದ ಪರಾಭವಗೊಳಿಸಿದ ಟೀಂ ಇಂಡಿಯಾ ವಿಶ್ವಕಪ್ ನ ಸೆಮಿಫೈನಲಿಗೇರಿದೆ.

ಈ ವಿಶ್ವಕಪ್ ನ ನಾಲ್ಕನೇ ಶತಕ ಬಾರಿಸಿದ ರೋಹಿತ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟಿಗೆ 180 ರನ್ ಪೇರಿಸಿ ತಂಡ 314 ರನ್ ಗಳ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಶಕಿಬ್ ಉಲ್ ಹಸನ್ 66 ರನ್ ಬಾರಿಸಿದರೂ ಜತೆಯಾಟದ ಕೊರತೆ ಅನುಭವಿಸಿದರು. ಬುಮ್ರಾ 55 ರನ್ ಗಳಿಗೆ ನಾಲ್ಕು ವಿಕೆಟ್ ಉರುಳಿಸಿ ಬಾಂಗ್ಲಾ ಬ್ಯಾಟ್ಸ್ ಮೆನ್ ಗಳನ್ನು ಕಾಡಿದರು.

ಟೀಂ ಇಂಡಿಯಾ 13 ಅಂಕಗಳನ್ನು ಪಡೆದು ಆಸ್ಟ್ರೇಲಿಯಾ ಬಳಿಕದ ಸ್ಥಾನದಲ್ಲಿದೆ. ಶನಿವಾರ ಶ್ರೀಲಂಕಾ ವಿರುದ್ಧ ಅಂತಿಮ ಪಂದ್ಯವನ್ನಾಡಲಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಕಪ್ತಾಣ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ರೋಹಿತ್ ಮತ್ತು ರಾಹುಲ್ ಭರ್ಜರಿ ಜತೆಯಾಟ ನಡೆಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮಧ್ಯಮ ಓವರ್ ಗಳಲ್ಲಿ ಬಾಂಗ್ಲಾ ಬೌಲರ್ ಗಳು ಪ್ರಾಬಲ್ಯ ಸಾಧಿಸಿದರೂ ಅಂತಿಮವಾಗಿ ಟೀಂ ಇಂಡಿಯಾ 300ರನ್ ಗಡಿದಾಟಲು ಸಾಧ್ಯವಾಯಿತು.

See also  ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಯ ಕೂದಲಿಡಿದು ಎಳೆದಾಡಿದ ಕಾನ್ಸ್ ಸ್ಟೇಬಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು