ಕೊಲಂಬೊ: ಶ್ರೀಲಂಕಾದ ವೇಗಿ ನುವಾನ್ ಕುಲಶೇಖರ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.
2017ರಲ್ಲಿ ಜಿಂಬಾಬ್ವೆ ವಿರುದ್ಧ ತನ್ನ ಕೊನೆಯ ಏಕದಿನ ಸರಣಿಯನ್ನು ಆಡಿದ ಕುಲಶೇಖರ ಅವರು ತನ್ನ 37ನೇ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆ ಈ ಘೋಷಣೆ ಮಾಡಿದ್ದಾರೆ.
ಜುಲೈ 26ರಂದು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಏಕದಿನ ಬಳಿಕ ಲಂಕಾದ ಇನ್ನೊಬ್ಬ ವೇಗಿ ಲಸಿತ್ ಮಲಿಂಗಾ ಕೂಡ ವಿದಾಯ ಹೇಳಲಿರುವರು.
ಕುಲಶೇಖರ ತನ್ನ 16 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದು, ಲಂಕಾ ಪರ ಗರಿಷ್ಠ ವಿಕೆಟ್ ಪಡೆದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಕುಲಶೇಖರ 2003ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದರ್ಪಣೆ ಮಾಡಿದ್ದರು. ಇದುವರೆಗೆ 184 ಏಕದಿನ ಆಡಿರುವ ಅವರು 199 ವಿಕೆಟ್ ಕಬಳಿಸಿರುವರು. 2012ರಲ್ಲಿ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 22 ರನ್ ಗಳಿಗೆ ಐದು ವಿಕೆಟ್ ಕಬಳಿಸಿರುವುದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.