News Kannada
Tuesday, November 29 2022

ಕ್ರೀಡೆ

ಟೆಕ್ವಾಂಡೊ ಜೋನ್ ಚಾಂಪಿಯನ್ ಶಿಪ್: ಮರ್ಕರ ಟೆಕ್ವಾಂಡೋ ಕ್ಲಬ್‍ನ ಚೇತನಶ್ರೀ ಆಯ್ಕೆ - 1 min read

Photo Credit :

ಟೆಕ್ವಾಂಡೊ ಜೋನ್ ಚಾಂಪಿಯನ್ ಶಿಪ್: ಮರ್ಕರ ಟೆಕ್ವಾಂಡೋ ಕ್ಲಬ್‍ನ ಚೇತನಶ್ರೀ ಆಯ್ಕೆ

ಮಡಿಕೇರಿ: ಉತ್ತರ ಭಾರತದಲ್ಲಿ ನ.11 ರಿಂದ 24ರ ವರೆಗೆ ನಡೆಯಲಿರುವ ಸಿಬಿಎಸ್‍ಸಿ ಸ್ಕೂಲ್ ಗೇಮ್ ಜೋನ್ ಟೆಕ್ವಾಂಡೋ ಚಾಂಪಿಯನ್ ಶಿಪ್‍ಗೆ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿನಿ ಚೇತನಶ್ರೀ ಆಯ್ಕೆಯಾಗಿದ್ದಾರೆ.

ಪಂದ್ಯಾವಳಿಯಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ವಿವಿಧ ಸಿಬಿಎಸ್‍ಸಿ ಶಾಲೆಯ ಪದಕ ಗಳಿಸಿದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ನಿಫಾನಿಯಲ್ಲಿ ನಡೆದ ಸಿಬಿಎಸ್‍ಸಿ ಸ್ಕೂಲ್ ಗೇಮ್‍ನ ಸೌತ್ ಜೋನ್ ಟೆಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಎಂ.ಜೆ.ಅಕ್ಷಯ್, ಎಂ.ಜೆ.ವಿಜಯ್, ಮಾನ್ಯ ಹಾಗೂ ಮೈಸೂರಿನ ಈಸ್ಟ್-ವೆಸ್ಟ್ ಶಾಲೆಯ ವಿದ್ಯಾರ್ಥಿನಿ ಚೇತನಶ್ರೀ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಈ ವಿದ್ಯಾರ್ಥಿಗಳು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

See also  ಅಂತಾರಾಜ್ಯ ಮುಕ್ತ ಕಬಡ್ಡಿ: ಆಳ್ವಾಸ್ ಚಾಂಪಿಯನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು