ರಾಂಚಿ: ಗೆಲುವಿಗೆ ಕೇವಲ ಎರಡು ವಿಕೆಟ್ ಬೇಕಾಗಿದ್ದ ಭಾರತವು ಇಂದು ಬೆಳಗ್ಗೆ ಆಟ ಆರಂಭವಾದ ವೇಳೆ ಗೆಲುವು ದಾಖಲಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಶಾಹಬಾಜ್ ನದೀಂ ಎರಡು ವಿಕೆಟ್ ಉರುಳಿಸಿ ವಿರಾಟ್ ಕೊಹ್ಲಿ ಪಡೆಯ ಗೆಲುವಿನ ವಿಧಿವಿಧಾನಗಳನ್ನು ಪೂರೈಸಿದರು. ಕೊಹ್ಲಿ ಪಡೆ 202 ರನ್ ಗಳಿಂದ ಗೆಲುವು ಪಡೆದು 3-0ರಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ನದೀಂ ಎರಡು ವಿಕೆಟ್ ಗಳಲ್ಲಿ ಎರಡು ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾದ ಅಂತಿಮ ಎರಡು ವಿಕೆಟ್ ಗಳನ್ನು ಉರುಳಿಸಿದರು.