ದುಬೈ: ಅಬುಧಾಬಿಯಲ್ಲಿ ನಡೆಯುವ ಟಿ-10 ಟೂರ್ನಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಆಡಲಿರುವರು.
ಯುವರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಬಳಿಕ ಈ ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ನವಂಬರ್ 14ರಿಂದ ಈ ಟೂರ್ನಿಯನ್ನು ಆಯೋಜಿಸಲು ಐಸಿಸಿ ಅನುಮತಿ ನೀಡಿದೆ.
ಯುವರಾಜ್ ಸಿಂಗ್ ಅವರು ಮರಾಠಾ ಅರೇಬಿಯನ್ಸ್ ತಂಡದ ಪರ ಆಡಲಿರುವರು.