News Kannada
Thursday, October 06 2022

ಕ್ರೀಡೆ

ರಾಜ್ಯ ಮಟ್ಟದ ಹಾಕಿ: ಮೈಸೂರು ವಿಭಾಗ ಚಾಂಪಿಯನ್ - 1 min read

Photo Credit :

ರಾಜ್ಯ ಮಟ್ಟದ ಹಾಕಿ: ಮೈಸೂರು ವಿಭಾಗ ಚಾಂಪಿಯನ್

ಮಡಿಕೇರಿ: ನಗರದ  ಸಾಯಿ ಹಾಕಿ ಮೈದಾನದಲ್ಲಿ  ಮುಕ್ತಾಯವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗ ಪಾರಮ್ಯ ಮೆರೆದಿದೆ.

ಶಿಕ್ಷಣ ಇಲಾಖೆ, ಇಬ್ನಿವಳವಾಡಿ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆದ ಹಾಕಿ ಟೂರ್ನಿಯಲ್ಲಿ 17ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗ ಮತ್ತು 14ರ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪಂದ್ಯಾವಳಿಯಲ್ಲಿ 14 ವರ್ಷ ವಯೋಮಿತಿ ವಿಭಾಗದಲ್ಲಿ ಕಲಬುರ್ಗಿ ಬಾಲಕರ ತಂಡ  ಪ್ರಥಮ ಸ್ಥಾನ ಗಳಿಸಿತು.

14 ವರ್ಷ ಒಳಗಿನ ವಿಭಾಗ (ಬಾಲಕರ ತಂಡ): ಕಲಬುರ್ಗಿ ವಿಭಾಗ ತಂಡವು 9 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. 6 ಅಂಕಗಳೊಂದಿಗೆ ಮೈಸೂರು ದ್ವಿತೀಯ, 3 ಅಂಕ ಪಡೆದ ಬೆಳಗಾವಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. 14 ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು 9 ಅಂಕ ಪಡೆದು ಚಾಂಪಿಯನ್ ಆದರೆ, ಬೆಳಗಾವಿ ತಂಡವು 6 ಅಂಕದೊಂದಿಗೆ ದ್ವಿತೀಯ, ಬೆಂಗಳೂರು ತಂಡವು 3 ಅಂಕದೊಂದಿಗೆ 3ನೇ ಸ್ಥಾನ, ಕಲಬುರ್ಗಿ ವಿಭಾಗವು ನಾಲ್ಕನೇ ಸ್ಥಾನ ಪಡೆಯಿತು.

17 ವರ್ಷ ಒಳಗಿನ ಬಾಲಕರ ವಿಭಾಗ: 15 ಅಂಕ ಪಡೆದ ಮೈಸೂರು ತಂಡವು ಮೊದಲ ಸ್ಥಾನ ಪಡೆದುಕೊಂಡರೆ,  ಕೂಡಿಗೆ ಕ್ರೀಡಾಶಾಲೆ ತಂಡವು 12 ಅಂಕದೊಂದಿಗೆ ದ್ವಿತೀಯ, ಬೆಂಗಳೂರಿನ ಎಚ್‍ಎಸ್‍ಎಸ್ ತಂಡವು 9 ಅಂಕಗಳೊಂದಿಗೆ 3ನೇ ಸ್ಥಾನ, 6 ಅಂಕ ಪಡೆದ ಕಲಬುರ್ಗಿ ತಂಡವು ನಾಲ್ಕನೇ ಸ್ಥಾನ ಪಡೆಯಿತು.

17 ವರ್ಷ ಒಳಗಿನ  ಬಾಲಕಿಯರ ವಿಭಾಗದಲ್ಲಿ  12 ಅಂಕ ಪಡೆದ ಮೈಸೂರು ವಿಭಾಗ ತಂಡ  ಚಾಂಪಿಯನ್, ಕೂಡಿಗೆ ಕ್ರೀಡಾಶಾಲೆ  ತಂಡವು 9 ಅಂಕದೊಂದಿಗೆ ದ್ವಿತೀಯ, ಬೆಳಗಾವಿ ತಂಡವು 6 ಅಂಕದೊಂದಿಗೆ ತೃತೀಯ, 3 ಅಂಕದೊಂದಿಗೆ ಕಲಬುರ್ಗಿ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಅಂತಿಮ ಹಣಾಹಣಿಗೂ ಮುನ್ನ ನಡೆದ 14 ವರ್ಷ ಒಳಗಿನ ಬಾಲಕಿಯರ ವಿಭಾಗದ   ಕಲಬುರ್ಗಿ ಹಾಗೂ ಬೆಂಗಳೂರು ತಂಡಗಳ ನಡುವಿನ  ಪಂದ್ಯದಲ್ಲಿ ಬೆಂಗಳೂರು ತಂಡವು 2-1 ಅಂತರದಲ್ಲಿ ಜಯ ಗಳಿಸಿತು. ಬೆಂಗಳೂರು ಪರ ಚೇತನಾ ಹಾಗೂ ಶ್ವೇತಾ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಲಬುರ್ಗಿ ಪರ ಮೇಘನಾ 1 ಗೋಲು ದಾಖಲಿಸಿದರು.

17ರ ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡ, ಐಎಚ್‍ಎಸ್ ಬೆಂಗಳೂರು ತಂಡದ ಎದುರು 1-3 ಅಂತರದಲ್ಲಿ ಸೋತಿತು. ಬೆಂಗಳೂರು ಪರ ಗೌರವ್ ಗಣಪತಿ, ವರುಣ್ ಬೋಪಣ್ಣ, ಮದನ್ ತಲಾ ಒಂದೊಂದು ಗೋಲು ದಾಖಲಿಸಿದರು. ಬೆಳಗಾವಿ ತಂಡದ ಪರ ಸೋಲಾಕ್ ಮಾರ್ತೆ ಒಂದು ಗೋಲು ದಾಖಲಿಸಿದರು.

ಮೈಸೂರು ಹಾಗೂ ಕೂಡಿಗೆ ನಡುವೆ ಪಂದ್ಯದಲ್ಲಿ ಮೈಸೂರು ತಂಡ, ಕೂಡಿಗೆ ತಂಡವನ್ನು 2-1 ಅಂತರದಲ್ಲಿ ಮಣಿಸಿತು. ಮೈಸೂರು ತಂಡದ ಪರ ಆರ್ಯನ್, ಚಂಗಪ್ಪ ಗೋಲು ದಾಖಲಿಸಿದರೆ, ಕೂಡಿಗೆ ತಂಡದ ಪರ ರಾಹುಲ್ ಒಂದು ಗೋಲು ದಾಖಲಿಸಿದರು.

See also  ಮೊದಲ ಟಿ-20 ಪಂದ್ಯ: ಟೀಂ ಇಂಡಿಯಾಗೆ ವಿರೋಚಿತ ಸೋಲು

17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ಹಾಗೂ ಕಲಬುರ್ಗಿ ತಂಡಗಳ ನಡುವಿನ ಪಂದ್ಯದಲ್ಲಿ ಮೈಸೂರು ತಂಡವು 13-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು