ನಾಗ್ಪುರ: ತನ್ನ ಕೀಪಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗಿರುವ ರಿಷಬ್ ಪಂತ್ ಗೆ ಟಿ-20 ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಂತ್ ವಿರುದ್ಧ ಪ್ರತಿದಿನವೂ ಟೀಕೆಗಳು ಬರುತ್ತಿದೆ. ಆದರೆ ಆತ ಯುವ ಆಟಗಾರ ಮತ್ತು ಅವರಿಗೆ ಮೈದಾನದಲ್ಲಿ ಕ್ರಿಕೆಟನ್ನು ಆನಂದಿಸಲು ಬಿಡಬೇಕು. ಪ್ರತಿಯೊಬ್ಬರು ಪಂತ್ ನ್ನು ಟೀಕಿಸುವುದನ್ನು ಬಿಡಬೇಕು ಎಂದು ರೋಹಿತ್ ಶರ್ಮಾ ತಿಳಿಸಿದರು.
ಪಂತ್ ಭೀತಿಯಿಲ್ಲದ ಕ್ರಿಕೆಟಿಗ ಮತ್ತು ಅವರು ಸ್ವತಂತ್ರವಾಗಿ ಆಡುವುದನ್ನು ತಂಡದ ಆಡಳಿತ ಬಯಸುತ್ತದೆ. ಜನರು ಅವರ ಮೇಲಿಂದ ಕಣ್ಣು ತೆಗೆದರೆ ಉತ್ತಮವಾಗಿ ಪ್ರದರ್ಶನ ನೀಡಲು ಸಾಧ್ಯವಾಗುವುದು ಎಂದರು.
ಅವರಿಗೆ ಈಗ ಕೇವಲ 22ರ ಹರೆಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವರು. ಮೈದಾನದಲ್ಲಿನ ಪ್ರತಿಯೊಂದು ವಿಚಾರದ ಬಗ್ಗೆಯೂ ಅವರು ಮಾತನಾಡುವರು. ಆದರೆ ಇದು ನ್ಯಾಯವಲ್ಲ. ಅವರಿಗೆ ತನ್ನದೇ ಆದ ರೀತಿಯಲ್ಲಿ ಕ್ರಿಕೆಟ್ ಆಡಲು ಬಿಡಬೇಕು ಎಂದು ರೋಹಿತ್ ತಿಳಿಸಿದರು.