ನವದೆಹಲಿ: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ ಆರು ವಿಕೆಟ್ ಕಬಳಿಸಿದ ವೇಗಿ ದೀಪಕ್ ಚಾಹರ್ ಗೆ ಪ್ರಶಂಸೆ ಸುರಿಮಳೆಯಾಗಿದೆ.
27ರ ಹರೆಯದ ವೇಗಿ ದೀಪಕ್ ಅವರು ಏಳು ರನ್ ಗಳಿಗೆ ಆರು ವಿಕೆಟ್ ಉರುಳಿಸಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ 30 ರನ್ ಗೆಲುವು ದಾಖಲಿಸಿಕೊಳ್ಳಲು ನೆರವಾದರು.
ಈ ದಾಖಲೆಯೊಂದಿಗೆ ದೀಪಕ್ ಶ್ರೀಲಂಕಾದ ಅಜಂತಾ ಮೆಂಡಿಸ್ ಎಂಟು ರನ್ ಗಳಿಗೆ ಆರು ವಿಕೆಟ್ ಪಡೆದಿರುವ ದಾಖಲೆ ಮುರಿದರು. ಮೆಂಡಿಸ್ 2012ರಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು.
ದೀಪಕ್ ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದು ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಸಾಧನೆ ಮಾಡಿದರು.
ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಸಹಿತ ಹಲವಾರು ಮಂದಿ ದೀಪಕ್ ಸಾಧನೆಯನ್ನು ಹೊಗಲಿರುವರು.