ಕೊಲ್ಕತ್ತಾ: ಶುಕ್ರವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಡೇನೈಟ್ ಟೆಸ್ಟ್ ಪಂದ್ಯದ ಬಗ್ಗೆ ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಈಗಾಗಲೇ ಕನಸು ಕಾಣಲು ಆರಂಭಿಸಿರುವರು.
ಗುಲಾಬಿ ಬಣ್ಣದ ಚೆಂಡಿನಲ್ಲಿ ಆಡಲ್ಪಡುವಂತಹ ಈ ಐತಿಹಾಸಿಕ ಟೆಸ್ಟ್ ನ ಬಗ್ಗೆ ಕನಸು ಕಾಣುತ್ತಿದ್ದೇನೆ ಎಂದು ಬದಿಯಲ್ಲೇ ಚೆಂಡು ಇರುವ, ನಿದ್ರೆ ಮಾಡುತ್ತಿರುವ ಫೋಟೊವನ್ನು ಟ್ವೀಟ್ ಮಾಡಿರುವ ರಹಾನ್ ಬರೆದಿದ್ದಾರೆ.
ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯವನ್ನು ಆಡಲು ರಹಾನೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರು ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿದರು.
ಮೊದಲ ಟೆಸ್ಟ್ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 130 ರನ್ ಗಳಿಂದ ಬಾಂಗ್ಲಾದೇಶವನ್ನು ಪರಾಭವಗೊಳಿಸಿತ್ತು.