News Kannada
Tuesday, November 29 2022

ಕ್ರೀಡೆ

ಜ.3 ರಿಂದ 12ರವರೆಗೆ ಮುಖ್ಯಮಂತ್ರಿಗಳ ಕಪ್ ಫುಟ್‍ಬಾಲ್ - 1 min read

Photo Credit :

ಜ.3 ರಿಂದ 12ರವರೆಗೆ ಮುಖ್ಯಮಂತ್ರಿಗಳ ಕಪ್ ಫುಟ್‍ಬಾಲ್

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಫುಟ್‍ಬಾಲ್ ಸಂಸ್ಥೆ, ಮಂಡ್ಯ ಜಿಲ್ಲಾ ಫುಟ್‍ಬಾಲ್ ಸಂಸ್ಥೆ ವತಿಯಿಂದ ಜ.3 ರಿಂದ 12ರವರೆಗೆ ಮುಖ್ಯಮಂತ್ರಿಗಳ ಕಪ್ ಅಖಿಲ ಭಾರತ ಆಹ್ವಾನ ಫುಟ್‍ಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂದ್ಯಾವಳಿ ನಡೆಸಲು ಎಲ್ಲ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಫುಟ್‍ಬಾಲ್ ಪಂದ್ಯಾವಳಿಯ ಪೋಷಕ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಶುಕ್ರವಾರ ನಗರದ ಸರ್‍ಎಂವಿ ಕ್ರೀಡಾಂಗಣದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಗಿರುವುದರಿಂದ 8 ತಂಡಗಳು ಭಾಗವಹಿಸಲಿವೆ. ಪ್ರತೀ ತಂಡದಿಂದ 20 ಮಂದಿ ಆಗಮಿಸಲಿದ್ದಾರೆ. 8 ಮಂದಿ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿದ್ದು, ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಎರಡು ಪಂದ್ಯಗಳು ನಡೆಯಲಿವೆ. ಪ್ರಥಮ ಬಹುಮಾನ 50 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 25 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ, ವೈಯಕ್ತಿಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ತಂಡದ ಆಟಗಾರರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಗಾಗಿ ಹಿಂದಿನ ಸಮ್ಮಿಶ್ರ ಸರ್ಕಾರ 10 ಲಕ್ಷ ರೂ. ಹಾಗೂ ಈಗಿನ ಸರ್ಕಾರ 15 ಲಕ್ಷ ರೂ. ಸೇರಿದಂತೆ ಒಟ್ಟು 25 ಲಕ್ಷ ರೂ. ಬಿಡುಗಡೆ ಮಾಡಿದೆ. ಪಂದ್ಯಾವಳಿ ತಗಲುವ ಅಗತ್ಯ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ. ಹಿಂದೆ ಜಿಲ್ಲೆಯಲ್ಲಿ 1985ರಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿ ಆಯೋಜಿಸಲಾಗಿತ್ತು. ಅದಾದ ಬಳಿಕ 2002 ಹಾಗೂ 2009ರಲ್ಲಿ ರಾಷ್ಟ್ರೀಯ ಪಂದ್ಯಾವಳಿ ನಡೆಸಿದ ಹೆಗ್ಗಳಿಕೆ ಇದೆ ಎಂದರು.

ಜ.3ರಂದು ಎಚ್‍ಎಎಲ್ ಸ್ಪೋರ್ಟ್ಸ್ ಕ್ಲಬ್-ಡೆಕ್ಕನ್ ಡೈನಾಮೋಸ್ ತೆಲಂಗಾಣ ಹಾಗೂ ಎಫ್‍ಸಿ ಮಂಗಳೂರು-ಬೆಂಗಳೂರು ಇಂಡಿಪೆಂಡೆಂಟ್ ಎಫ್‍ಸಿ ತಂಡಗಳು ಮುಖಾಮುಖಿಯಾಗಲಿವೆ. 4ರಂದು ಬೆಂಗಳೂರು ಡ್ರೀಮ್ಸ್ ಯೂನಿಟೆಡ್ ಎಫ್‍ಸಿ-ಕಿಕ್‍ಸ್ಟಾರ್ಟ್ ಎಫ್‍ಸಿ ಕರ್ನಾಟಕ ಹಾಗೂ ಕೆಎಸ್‍ಇಬಿ ಕೇರಳ-ಎಎಸ್‍ಎ ಅನಂತಪುರ್ ಆಂಧ್ರಪ್ರದೇಶ, 5ರಂದು ಎಫ್‍ಸಿ ಮಂಗಳೂರು-ಎಚ್‍ಎಎಲ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಬೆಂಗಳೂರು ಇಂಡಿಪೆಂಡೆಂಟ್ ಎಫ್‍ಸಿ-ಡೆಕ್ಕನ್ ಡೈನಾಮೋಸ್ ತೆಲಂಗಾಣ, 6ರಂದು ಕಿಕ್‍ಸ್ಟಾರ್ಟ್ ಎಫ್‍ಸಿ ಕರ್ನಾಟಕ-ಎಎಸ್‍ಎ ಅನಂತಪುರ್ ಆಂಧ್ರಪ್ರದೇಶ ಹಾಗೂ ಕೆಎಸ್‍ಇಬಿ ಕೇರಳ-ಬೆಂಗಳೂರು ಡ್ರೀಮ್ಸ್ ಯೂನಿಟೆಡ್ ಎಫ್‍ಸಿ, 7ರಂದು ಎಚ್‍ಎಎಲ್ ಸ್ಪೋರ್ಟ್ಸ್ ಕ್ಲಬ್-ಬೆಂಗಳೂರು ಇಂಡಿಪೆಂಡೆಂಟ್ ಎಫ್‍ಸಿ ಹಾಗೂ ಎಫ್‍ಸಿ ಮಂಗಳೂರು-ಡೆಕ್ಕನ್ ಡೈನಾಮೋಸ್ ತೆಲಂಗಾಣ, 8ರಂದು ಬೆಂಗಳೂರು ಡ್ರೀಮ್ಸ್ ಯೂನಿಟೆಡ್ ಎಫ್‍ಸಿ-ಎಎಸ್‍ಎ ಅನಂತಪುರ್ ಆಂಧ್ರಪ್ರದೇಶ ಹಾಗೂ ಕಿಕ್‍ಸ್ಟಾರ್ಟ್ ಎಫ್‍ಸಿ ಕರ್ನಾಟಕ-ಕೆಎಸ್‍ಇಬಿ ಕೇರಳ, 9ರಂದು ಯಾವುದೇ ಪಂದ್ಯಗಳು ಇರುವುದಿಲ್ಲ. ಜ.10ರಂದು ಮಧ್ಯಾಹ್ನ 1.15ಕ್ಕೆ ಎ ಗ್ರೂಪ್ ಮೊದಲನೇ ಸೆಮಿಫೈನಲ್ ಹಾಗೂ ಸಂಜೆ 4ಕ್ಕೆ ಬಿ ಗ್ರೂಪ್‍ನ ಎರಡನೇ ಸೆಮಿಫೈನಲ್ ಪಂದ್ಯಾವಳಿಗಳು ನಡೆಯಲಿದ್ದು, ಜ.12ರಂದು 3.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

See also  ಮಹಿಳಾ ಫುಟ್ಬಾಲ್ ತಂಡವು ಬಹ್ರೇನ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು