ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ನ ಸ್ಟಾರ್ ಆಟಗಾರ ಸುರೇಶ್ ರೈನಾ ಅವರು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದು, ತಂಡಕ್ಕೆ ಆಘಾತವಾಗಿದೆ.
ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರು ಆಟಗಾರರು ಹಾಗೂ ಎಂಟು ಮಂದಿ ನೆರವು ಸಿಬ್ಬಂದಿಗೆ ಕೊರೋನಾ ಪತ್ತೆಯಾದ ಬಳಿಕ ರೈನಾ ಆಡದೆ ಇರುವುದು ತಂಡಕ್ಕೆ ದೊಡ್ಡ ಆಘಾತ ನೀಡಿದಂತಾಗಿದೆ.
ರೈನಾ ವೈಯಕ್ತಿಕ ಕಾರಣಗಳಿಂದಾಗಿ ಸ್ವದೇಶಕ್ಕೆ ಹಿಂತಿರಿಗಿರುವರು. ಐಪಿಎಲ್ ನ ಯಾವ ಪಂದ್ಯಕ್ಕೂ ಲಭ್ಯನಾಗಿರಲ್ಲ. ಅವರು ಮತ್ತು ಅವರ ಕುಟುಂಬಕ್ಕೆ ಸಿಎಸ್ ಕೆ ಸಂಪೂರ್ಣ ಬೆಂಬಲವಿದೆ ಎಂದು ತಂಡದ ಟ್ವೀಟ್ ನಲ್ಲಿ ಹೇಳಿದೆ.