ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಪಡೆಗೆ ಪಂದ್ಯ ಶುಲ್ಕದ ಶೇ. 20 ದಂಡ ಹೇರಲಾಗಿದೆ.
ಓವರ್ ಸರಾಸರಿ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ರೆಫ್ರಿ ಡೇವಿಡ್ ಬೂನ್ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ಐಸಿಸಿಯ ನೀತಿ ಸಂಹಿತೆ 2.22 ಪ್ರಕಾರ ಕನಿಷ್ಟ ಓವರ್ ರೇಟ್ ಅಪರಾಧಕ್ಕೆ ಸಂಬಂಧಿಸಿದಂತೆ ಆಟಗಾರರು ಹಾಗೂ ಆಟಗಾರರ ಬೆಂಬಲ ಸಿಬ್ಬಂದಿ ನೀತಿ ಪ್ರಕಾರ ಭಾರತೀಯ ಆಟಗಾರರಿಗೆ ತಮ್ಮ ಪಂದ್ಯದ 20ರಷ್ಟು ದಂಡ ವಿಧಿಸಿದೆ.
ಪಂದ್ಯದ ನಂತರ ವಿರಾಟ್ ತಮ್ಮ ತಪ್ಪೊಪ್ಪಿಕೊಂಡಿದ್ದು ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯ ಇಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಅಂಪೈರ್ ಗಳಾದ ರಾಡ್ ಟಕರ್, ಸ್ಯಾಮ್ ನಿಗಾಸ್ಕಿ, ಟಿ.ವಿ ಅಂಪೈರ್ ಗಳಾದ ಪಾಲ್ ರಿಫೆಲ್, ನಾಲ್ಕನೇ ಅಂಪೈರ್ ಗಳಾದ ರೆಗಾರ್ಡ್ ಅಬೂದ್ ಈ ಆರೋಪ ಹೊರಿಸಿದ್ದರು.