ನವದೆಹಲಿ: ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಸೋಲಲು ವಿರಾಟ್ ಕೊಹ್ಲಿ ನಾಯಕತ್ವವೇ ಕಾರಣ ಎಂದು ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ದೂರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಮೊದೆಲೆರಡು ಪಂದ್ಯಗಳಲ್ಲಿ ಸೋಲುಂಡು ಸರಣಿ ಕಳಕೊಂಡಿದೆ.
ಮೊದಲ ಹಾಗೂ ಎರಡನೇ ಏಕದಿನದಲ್ಲಿ ಆಸ್ಟ್ರೇಲಿಯಾವು 300ಕ್ಕೂ ಅಧಿಕ ರನ್ ಪೇರಿಸಿ ಭಾರತದ ಬೌಲಿಂಗ್ ಪಡೆಯನ್ನು ನುಚ್ಚು ನೂರು ಮಾಡಿದೆ.
ನಾಯಕನಾದವನು ತುಂಬಾ ಪ್ರಾಮಾಣಿಕವಾಗಿ ಇರಬೇಕು. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಸರಣಿ ಗೆಲ್ಲಲು ವಿಕೆಟ್ ಪಡೆಯುವುದು ಅತೀ ಅಗತ್ಯವಾಗಿರುವುದು ಎಂದು ಗಂಭೀರ್ ತಿಳಿಸಿರುವರು.
ಪ್ರಮುಖ ಬೌಲರ್ ಗಳಿಗೆ ಆರಂಭದ ಕೇವಲ ಎರಡು ಓವರ್ ಗಳನ್ನು ನೀಡಿರುವುದು ದೊಡ್ಡ ತಪ್ಪು. ಮೊದಲ ಹತ್ತು ಓವರ್ ಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಓವರ್ ಗಳನ್ನು ನೀಡಬೇಕು ಎಂದು ಗಂಭೀರ್ ಹೇಳಿರುವರು. ಕೇವಲ ಎರಡೇ ಓವರ್ ಗಳಲ್ಲಿ ಪ್ರಮುಖ ಬೌಲರ್ ಗಳನ್ನು ನಿಲ್ಲಿಸುವುದು ದೊಡ್ಡ ತಪ್ಪು ಎಂದರು.