ಕ್ಯಾನ್ಬೆರ್ರಾ: ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ. ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 12000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದಾರು.
ಹೌದು, ಇಂದು ಆಸ್ಟ್ರೇಲಿಯಾದ ಹಾಗೂ ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯಕ್ಕೆ ಮೊದಲು ಕೊಹ್ಲಿ 241 ಇನಿಂಗ್ಸ್ ಗಳಿಂದ 11977 ರನ್ ಬಾರಿಸಿದ್ದರು.
ಈ ಹಿಂದೆ ಸಚಿನ್ ತೆಂಡೂಲ್ಕರ್ 12000 ರನ್ ಪೂರೈಸಲು 309 ಪಂದ್ಯಗಳಿಂದ 300 ಇನಿಂಗ್ಸ್ ತೆಗೆದುಕೊಂಡಿದ್ದರು. ಇವರಿಬ್ಬರಲ್ಲದೆ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕರ, ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ ಅವರು ಕೂಡ ಏಕದಿನ ಪಂದ್ಯಗಳಲ್ಲಿ 12000 ರನ್ ಗಳಿಸಿದ ಆಟಗಾರರಾಗಿದ್ದಾರೆ. ಹೀಗಾಗಿ ಏಕದಿನ ಪಂದ್ಯದಲ್ಲಿ 12000 ಪೂರೈಸಿದ ವಿಶ್ವದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.