ನವದೆಹಲಿ : ನಿನ್ನೆಯ ಆಸೀಸ್ ವಿರುದ್ಧದ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ 36 ರನ್ಸ್ ಗಳಿಸುವ ಮೂಲಕ ಹೀನಾಯವಾಗಿ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ನಟಿ ಅನುಷ್ಕಾ ಶರ್ಮಾ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ.
ಕೆಲವರ್ಷಗಳಿಂದ ಈ ಹೊಸದೊಂದು ಮನಸ್ಥಿತಿ ಉದ್ಭವವಾಗಿದ್ದು ಭಾರತ ತಂಡ ಸೋಲಿನ ಬಳಿಕ ಅಥವಾ ಕಳಸ ಪ್ರದರ್ಶನ ತೋರಿದ ಸಮಯದಲ್ಲಿ ಅವರ ಆತ್ಮೀಯರು ಅಥವಾ ಸಂಬಂಧಿಗಳ ಕುರಿತು ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ. ಇದೀಗ ಭಾರತದ ಹೀನಾಯ ಸೋಲಿನ ಬಳಿಕ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಟ್ರೋಲ್ ಮಾಡುವುದು ಪ್ರಾರಂಭವಾಗಿದೆ. ಅದರಂತೆ ಟೆಸ್ಟ್ ಕ್ರಿಕೆಟ್ನಲ್ಲೆ ಕಳಪೆ ದಾಖಲೆ ಬರೆದ ನಂತರ ಅನುಷ್ಕಾ ಶರ್ಮಾ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳನ್ನು ಎದುರಿಸುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಪಿತೃತ್ವದ ರಜೆ ಮೇಲೆ ತವರಿಗೆ ಹಿಂದಿರುಗುತ್ತಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಷ್ಟ್ರದ ಹಿತಕ್ಕಿಂತ ಕುಟುಂಬವೇ ಹೆಚ್ಚಾಯ್ತಾ? ಎಂದು ಪ್ರಶ್ನೆ ಮಾಡುತ್ತಿವೆ. ಒಂದೆಡೆ ಅನುಷ್ಕಾ ಶರ್ಮಾ ಅವರನ್ನು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಅಂತಹವರ ವಿರುದ್ಧ ಧ್ವನಿ ಎತ್ತಿದ್ದಾರೆ.