ದುಬಾೖ: ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೂರನೇ ಸ್ಥಾನವನ್ನು ಕಾಯ್ದು ಕೊಂಡಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಕೂಡಾ ಒಂದು ಸ್ಥಾನ ಮೇಲೇರಿದ್ದು, 7ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದು, ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರಿದ್ದಾರೆ.
ಇಂಗ್ಲೆಂಡಿನ ಡೇವಿಡ್ ಮಾಲನ್ (915) ಅಂಕ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ಥಾನದ ಬಾಬರ್ ಆಜಂ (820) ಅಂಕಗಳೊಂದಿಗೆ ಎರಡನೆಯ ಸ್ಥಾನ ಪಡೆದಿದ್ದಾರೆ. ರಾಹುಲ್ ಒಟ್ಟು 816 ಅಂಕ ಪಡೆದಿದ್ದು 3 ನೆಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಮೊದಲೆರಡು ಸ್ಥಾನದಲ್ಲಿ ಮತ್ತೆ ಮುಂದುವರೆದ್ದಾರೆ.
ತಂಡ ರ್ಯಾಂಕಿಂಗ್
ಮೊದಲ 3 ಸ್ಥಾನದಲ್ಲಿರುವ ತಂಡಗಳೆಂದರೆ ಇಂಗ್ಲೆಂಡ್ (275) ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ (272) ಮತ್ತು ಭಾರತ (268) ಅಂಕಗಳೊಂದಿಗೆ 2 ಹಾಗೂ 3 ನೆಯ ಸ್ಥಾನದಲ್ಲಿವೆ. ಟೀಮ್ ರ್ಯಾಂಕಿಂಗ್ನಲ್ಲಿ ಸರಣಿ ಗೆದ್ದ ನ್ಯೂಜಿಲ್ಯಾಂಡ್ 3 ಅಂಕ ಗಳಿಸಿದರೆ, ಪರಾಜಿತ ಪಾಕಿಸ್ತಾನ 3 ಅಂಕ ಕಳೆದುಕೊಂಡಿದೆ. ಆದರೆ ಎರಡೂ ತಂಡಗಳು 4ನೇ ಹಾಗೂ 6ನೇ ಸ್ಥಾನವನ್ನು ಕಾಯ್ದುಕೊಂಡಿವೆ.