ಮೆಲ್ಬೊರ್ನ್: ಸ್ವಿಟ್ಜರ್ಲೆಂಡ್ನ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿಯುತ್ತಿದ್ದಾರೆ ಎಂದು ಸೋಮವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ರೋಜರ್, ಫೆಬ್ರವರಿ 8ರಿಂದ ಮೆಲ್ಬೊರ್ನ್ನಲ್ಲಿ ಆರಂಭವಾಗಲಿರುವ ಗ್ರ್ಯಾನ್ ಸ್ಲ್ಯಾಮ್ ಪ್ರವೇಶ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.
ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲ್ಯಾಮ್ಗೆ ಸಿದ್ಧರಾಗಲು ರೋಜರ್ ಫೆಡರರ್ ಬಳಿ ಸಾಕಷ್ಟು ಸಮಯವಿಲ್ಲ. ಇದೇ ಕಾರಣದಿಂದ 2021ರ ಮೆಲ್ಬೊರ್ನ್ ಟೂರ್ನಿ ಆಡಲು ರೋಜರ್ ಫೆಡರರ್ ಹಿಂದೇಟು ಹಾಕಿದ್ದು, ಇದರಿಂದ ತೀವ್ರ ಹತಾಶೆಗೊಂಡಿದ್ದಾರೆ,” ಎಂದು ಟೂರ್ನಮೆಂಟ್ ಮುಖ್ಯಸ್ಥ ಕ್ರೇಗ್ ಟಿಲೆ ತಿಳಿಸಿದ್ದಾರೆ.
2020ರ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ನಲ್ಲಿ ನೋವಾಕ್ ಜೊಕೊವಿಕ್ ವಿರುದ್ಧ ಸೋತ ಬಳಿಕ ಫೆಡರರ್ ಯಾವುದೇ ಟೂರ್ನಿಯಲ್ಲಿ ರೋಜರ್ ಆಡಿಲ್ಲ.
ಕಮ್ ಬ್ಯಾಕ್ ಮಾಡಲು ತಯಾರಿ ನಡೆಸುತ್ತಿರುವ ಫೆಡರರ್ಗೆ ನಾವು ಶುಭ ಕೋರುತ್ತೇವೆ ಹಾಗೂ 2022ರ ಮೆಲ್ಬರ್ನ್ ಟೂರ್ನಿಯಲ್ಲಿ ಅವರನ್ನು ನೋಡಲು ಬಯಸುತ್ತೇವೆ ಎಂದಿದ್ದಾರೆ.