NewsKarnataka
Saturday, July 31 2021

ಕ್ರೀಡೆ

ಹಾಕಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದಲ್ಲಿದ್ದ ಕೇಶವ್ ದತ್ ನಿಧನ

ಕೋಲ್ಕತ್ತಾ: ಹಾಕಿಯಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ (95) ಬುಧವಾರ ನಿಧನರಾದರು.

1948ರ ಲಂಡನ್ ಕ್ರೀಡಾಕೂಟದಲ್ಲಿ ದತ್ ಭಾರತೀಯ ಜರ್ಸಿಯನ್ನು ಧರಿಸಿದ್ದರು, ಅಲ್ಲಿ ಭಾರತವು ಸ್ವಾತಂತ್ರ್ಯದ ನಂತರ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು, ಮತ್ತು ಇವರು ಸದಸ್ಯರಾಗಿದ್ದ ತಂಡ ತನ್ನ ಎರಡನೇ ಒಲಿಂಪಿಕ್ ಚಿನ್ನವನ್ನು ಹೆಲ್ಸಿಂಕಿಯಲ್ಲಿ 1952 ರಲ್ಲಿ ಗೆದ್ದುಕೊಂಡಿತ್ತು.

“ಈ ಮುಂಜಾನೆ ಹಾಕಿ ದಂತಕಥೆ ಹಾಫ್‌ಬ್ಯಾಕ್ ಕೇಶವ್ ದತ್ ಅವರ ನಿಧನದ ಬಗ್ಗೆ ಕೇಳಿ ನಾವೆಲ್ಲರೂ ತುಂಬಾ ದುಃಖಿತರಾಗಿದ್ದೇವೆ. ಅವರು 1948 ಮತ್ತು 1952 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನಗೆದ್ದ ತಂಡದ ಸದಸ್ಯರಾಗಿದ್ದರು. ಅವರ ನಿಧನದಿಂದ ಇಂದು ನಿಜವಾಗಿಯೂ ಒಂದು ಯುಗಾಂತ್ಯವಾಗಿದೆ. ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೊ ನಿಂಗೋಂಬಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.