News Kannada
Saturday, December 03 2022

ಕ್ರೀಡೆ

ಭಾರತದ ಮಹಿಳಾ ಹಾಕಿ ತಂಡ ಮುಖ್ಯ ಕೋಚ್ ಸ್ಯೋರ್ಡ್ ಮರೈನ್ ರಾಜೀನಾಮೆ

Photo Credit :

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅಮೋಘ ಪ್ರದರ್ಶನ ನೀಡಿದ ಬೆನ್ನಲ್ಲೇ ಮುಖ್ಯ ಕೋಚ್ ಸ್ಯೋರ್ಡ್ ಮರೈನ್ ರಾಜೀನಾಮೆ ನೀಡಿದ್ದಾರೆ.

ಕಂಚಿನ ಪದಕ ಕೈತಪ್ಪಿರುವ ಭಾರತದ ಮಹಿಳಾ ಹಾಕಿ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಒಲಿಂಪಿಕ್ಸ್‌ನೊಂದಿಗೆ ಭಾರತದ ಮಹಿಳಾ ಹಾಕಿ ತಂಡದೊಂದಿಗಿನ ತಮ್ಮ ಅಭಿಯಾನ ಕೊನೆಗೊಂಡಿದೆ ಎಂಬುದನ್ನು ಮುಖ್ಯ ಕೋಚ್ ಡಚ್ ಮೂಲದ ಸ್ಯೋರ್ಡ್ ಮರೈನ್ ಹೇಳಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಐತಿಹಾಸಿಕ ಸಾಧನೆಯಲ್ಲಿ ವಿದೇಶಿ ಕೋಚ್ ಸ್ಯೋರ್ಡ್ ಮರೈನ್ ಕೊಡುಗೆ ಮಹತ್ತರವಾಗಿದೆ. ಹಾಕಿ ಆಟಗಾರ್ತಿಯರು ಶ್ರೇಷ್ಠ ಪ್ರದರ್ಶನ ನೀಡಲು ಕೋಚ್ ಪ್ರಮುಖ ಪಾತ್ರ ವಹಿಸಿದ್ದರು.

47 ವರ್ಷದ ಸ್ಯೋರ್ಡ್ ತಮ್ಮ ವಿಶಿಷ್ಟ ರೀತಿಯ ತರಬೇತಿ ಶೈಲಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಟಗಾರ್ತಿಯರ ಪಾಲಿಗೆ ನೆಚ್ಚಿನ ಕೋಚ್ ಆಗಿ ಮೂಡಿಬಂದಿದ್ದರು. ಕಂಚಿನ ಪದಕದ ಹೋರಾಟದಲ್ಲಿ ಬ್ರಿಟನ್ ವಿರುದ್ಧ ಸೋಲು ಅನುಭವಿಸಿದರೂ ಆಟಗಾರ್ತಿಯರ ಜೊತೆಗೆ ಕೋಚ್ ಸಾಧನೆಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹಾಕಿ ತಂಡಕ್ಕೆ ಪ್ರಾಯೋಜಕತ್ವ ವಹಿಸುವ ಮೂಲಕ ಎಲ್ಲ ರೀತಿಯ ಬೆಂಬಲ ನೀಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಹಾಗೂ ಒಡಿಶಾ ಸ್ಪೋರ್ಟ್ಸ್‌ಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

See also  ರೋಹಿತ್ ಶರ್ಮಾ ಅತ್ಯುತ್ತಮ ಆಟಕ್ಕೆ ವಿರಾಟ್ ಶಭಾಷ್; ಎಲ್ಲೆಡೆ ವೈರಲ್ ಆದ ಫೋಟೋ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು