ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಅವಧಿಗೆ ಮೂವರು ಬದಲಿ ಆಟಗಾರರನ್ನು ಸೇರಿಸಿಕೊಂಡಿರುವವರ ಪೈಕಿ ಶ್ರೀಲಂಕಾ ಆಲ್ರೌಂಡರ್ ವಾನಿಂದು ಹಸರಂಗ ಕೂಡ ಒಬ್ಬರು. ಆಸ್ಟ್ರೇಲಿಯಾದ ಆಡಂ ಝಾಂಪ ಅವರ ಸ್ಥಾನಕ್ಕೆ ಹಸರಂಗ ಅವರಿಗೆ ಆರ್ಸಿಬಿ ಸ್ಥಾನ ಕಲ್ಪಿಸಿದೆ.
ಬೆಂಗಳೂರು ಫ್ರಾಂಚೈಸಿ ತನ್ನನ್ನು ಆಯ್ಕೆ ಮಾಡಿರುವ ವಿಷಯ ತಿಳಿಯುತ್ತಿ ಲಂಕಾ ಆಲ್ರೌಂಡರ್ ವಾನಿಂದ ಹಸರಂಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಕುಳಿತು ಆರ್ಸಿಬಿ ಪಂದ್ಯವನ್ನು ನೋಡುತ್ತಿದ್ದೆ. ಆದರೆ, ಇದೀಗ ಅದೇ ತಂಡದ ಭಾಗವಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
“ಮನೆಯಲ್ಲಿ ಕುಳಿತು ಆರ್ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ಇದೀಗ ಅದೇ ತಂಡದ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಆರ್ಸಿಬಿ ಪರ ಆಡಲು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ರೋಮಾಂಚನಗೊಂಡಿದ್ದೇನೆ,” ಎಂದು ವಾನಿಂದು ಹಸರಂಗ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.