NewsKarnataka
Saturday, November 27 2021

ಕ್ರೀಡೆ

ಕೊಹ್ಲಿಯ ಆಕ್ರಮಣಕಾರಿ ವ್ಯಕ್ತಿತ್ವವನ್ನು ಟೀಕಿಸಿದ ಪಠಾಣ

ಲಾರ್ಡ್ಸ್ :ಇoಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ರನ್‌ ಬರ ಎದುರಿಸಿರುವ ವಿರಾಟ್‌ ಕೊಹ್ಲಿ ಅವರಿಗೆ ತಂತ್ರಗಾರಿಕೆಯಲ್ಲಿ ಯಾವುದೇ ಕೊರತೆ ಇಲ್ಲ, ಬದಲಿಗೆ ಆಕ್ರಮಣಕಾರಿ ಸ್ವಭಾವವೇ ದೊಡ್ಡ ಸಮಸ್ಯೆ ಆಗಿದೆ ಎಂದು ಪಠಾಣ್‌ ಹೇಳಿದ್ದಾರೆ.

ಸರಣಿಯಲ್ಲಿ ಈವರೆಗೆ ಐದು ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 24.80ರ ಸರಾಸರಿಯಲ್ಲಿ ಕೇವಲ 124 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಲೀಡ್ಸ್‌ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು ಗಳಿಸಿದ 55 ರನ್‌ ಸರಣಿಯಲ್ಲಿ ಗಳಿಸಿದ ಮೊದಲ ಅರ್ಧಶತಕವಾಗಿದೆ. ಈ ಬಗ್ಗೆ ಆಕಾಶ್ ಚೋಪ್ರಾ ಅವರ ಯೂ ಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್‌ ಪಠಾಣ್‌, ಟೀಮ್ ಇಂಡಿಯಾ ನಾಯಕನಿಗೆ ಕಾಡುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
ಭಾರತ ಟೆಸ್ಟ್‌ ತಂಡದಲ್ಲಿ ರಹಾನೆ ಸ್ಥಾನ ತುಂಬಬಲ್ಲ ಟಾಪ್‌ 3 ಬ್ಯಾಟ್ಸ್‌ಮನ್‌ಗಳು!

“ಪಂದ್ಯಕ್ಕೆ ಪೂರ್ವ ತಯಾರಿಗಿಂತಲೂ ಆಕ್ರಮಣಕಾರಿ ಆಟವಾಡುವ ಮನಸ್ಥಿತಿಯಲ್ಲಿ ಕೊಹ್ಲಿ ಆಫ್‌ಸ್ಟಂಪ್‌ನಿಂದ ಆಚೆ ಇರುವ ಚೆಂಡುಗಳನ್ನು ಕೆಣಕಿ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಇದು ಬಹಳಾ ಸಣ್ಣ ತಪ್ಪು. ಅವರ ಬ್ಯಾಟಿಂಗ್‌ ತಂತ್ರಗಾರಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆಕ್ರಮಣಕಾರಿ ಆಟವಾಡುವ ಆಲೋಚನೆ ಸಮಸ್ಯೆ ತಂದೊಡ್ಡುತ್ತಿದೆ,” ಎಂದು ಪಠಾಣ್‌ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!