ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ವಿಜೇತರಿಗೆ ಶುಭಾಶಯಗಳ ಸುರಿಮಳೆ ಬರುತ್ತಿದೆ. ಶೂಟಿಂಗ್ನಲ್ಲಿ ಪದಕ ಗೆದ್ದ ಮನೀಷ್ ನರ್ವಾಲ್ ಮತ್ತು ಸಿಂಗ್ರಾಜ್ ಆಧಾನ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶುಭಕೋರಿದರು.
ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಶೂಟರ್ ಮನೀಷ್ ನರ್ವಾಲ್ ಅವರು ದಾಖಲೆ ಮುರಿಯುವ ಮೂಲಕ ಭಾರತಕ್ಕೆ ಮೂರನೇ ಚಿನ್ನದ ಪದಕವನ್ನು ಗೆದ್ದರೆ, ಸಿಂಗ್ರಾಜ್ ಆಧಾನ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,‘ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ವೈಭವ ಮುಂದುವರಿದಿದೆ. ಭಾರತಕ್ಕೆ ಚಿನ್ನ ಗೆಲ್ಲುವ ಮೂಲಕ ಯುವ ಮತ್ತು ಅದ್ಭುತ ಪ್ರತಿಭೆಯ ಮನೀಶ್ ನರ್ವಾಲ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾರತೀಯ ಕ್ರೀಡೆಗೆ ಇದು ವಿಶೇಷ ಕ್ಷಣವಾಗಿದೆ. ನಿಮಗೆ ಅಭಿನಂದನೆಗಳು’ ಎಂದು ಶುಭಹಾರೈಸಿದ್ದಾರೆ.