News Kannada
Monday, October 03 2022

ಕ್ರೀಡೆ

ಟಿ20 ವಿಶ್ವಕಪ್​ 2021ರ ಅಧಿಕೃತ ಗೀತೆ ಬಿಡುಗಡೆ - 1 min read

Photo Credit :

ಟಿ20 : ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ICC) ಗುರುವಾರ ಪುರುಷರ ಟಿ20 ವಿಶ್ವಕಪ್​ 2021ರ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಗೀತೆಯನ್ನು ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ ಸಂಯೋಜಿಸಿದ್ದಾರೆ. ವಿಡಿಯೋದಲ್ಲಿ ವಿರಾಟ್​ , ಪೊಲಾರ್ಡ್​ , ಅಫ್ಘಾನಿಸ್ತಾನದ ರಶೀದ್​ ಖಾನ್​ ಮತ್ತು ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್​ ಹಾಗೂ ಕೆಲವು ಯುವ ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ.

ವಿಶ್ವದಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಟಿ20 ಮಹಾಕೂಟವನ್ನು ನೋಡುವುದಕ್ಕೆ ಉತ್ಸಾಹದಿಂದ ಕಾತರಿಸುತ್ತಿರುವಂತೆ ಹಾಡು ಮೂಡಿಬಂದಿದೆ.ಇನ್ನು ಸಂಪೂರ್ಣ ವಿಡಿಯೋವನ್ನು ಅವತಾರ್​ ಆ್ಯನಿಮೇಷನ್​ 3ಡಿ ಮತ್ತು 2ಡಿ ಎಫೆಕ್ಟ್​ ಮೂಲಕ ಹೊಸ ಬ್ರಾಡ್​ಕಾಸ್ಟಿಂಗ್​ ಟೆಕ್ನಾಲಜಿ ಬಳಸಿ ನಿರ್ಮಾಣ ಮಾಡಲಾಗಿದೆ.

ಆಕರ್ಷಕ ಗೀತೆ ರಚನಾ ಕಾರ್ಯದಲ್ಲಿ ಡಿಸೈನರ್, ಮಾಡೆಲರ್ಸ್, ಮ್ಯಾಟ್​ ಪೇಂಟರ್ಸ್​, ಆ್ಯನಿಮೇಟರ್ಸ್, ಲೈಟರ್ಸ್​ ಮತ್ತು ಕಂಪೋಜಿಸಟರ್ಸ್ ಸೇರಿದಂತೆ ಒಟ್ಟು 40 ಸದಸ್ಯರ ಪ್ರೊಡಕ್ಷನ್ ತಂಡ ಭಾಗಿಯಾಗಿದ್ದಾರೆ ಎಂದು ಐಸಿಸಿ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿದೆ.

See also  345 ರನ್‌ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು