News Kannada
Monday, December 05 2022

ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ದಾಳಿಗೆ ಮಂಕಾದ ಪಂಜಾಬ್ ಕಿಂಗ್ಸ್

Photo Credit :

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ದಾಳಿಗೆ ಮಂಕಾದ ಪಂಜಾಬ್ ಕಿಂಗ್ಸ್ ತಂಡ ಕೇವಲ136ರನ್​ಗಳ ಸಾಧಾರಣ ಗುರಿ ನೀಡಿದೆ. ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮಯಾಂಕ್​ ಅನುಪಸ್ಥಿತಿಯಲ್ಲಿ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮಂದೀಪ್ ಸಿಂಗ್ ಕೇವಲ 15 ರನ್​ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್​ ಒಪ್ಪಿಸಿದರು. 6ನೇ ಓವರ್​ನಲ್ಲೇ ಕೀರನ್ ಪೊಲಾರ್ಡ್​ ಕ್ರಿಸ್​ ಗೇಲ್(1) ಮತ್ತು ಎದುರಾಳಿ ನಾಯಕ ರಾಹುಲ್​(21) ರನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು.

ಆರಂಭಿಕ 3 ಬ್ಯಾಟರ್​ಗಳು ಪೆವಿಲಿಯನ್​ ಸೇರಿದ ಮೇಲೆ ವಿಂಡೀಸ್ ಸ್ಟಾರ್​ ಪೂರನ್​ ಕೂಡ ಬುಮ್ರಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕೇವಲ 48 ರನ್​ಗಳಾಗುವಷ್ಟರಲ್ಲಿ ಪಂಜಾಬ್ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ ಐಡೆನ್ ಮಾರ್ಕ್ರಮ್​ 29 ಎಸೆತಗಳಲ್ಲಿ 42 ರನ್​ ಹಾಗೂ ದೀಪಕ್ ಹೂಡ 26 ಎಸೆತಗಳಲ್ಲಿ 28 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹರ್​​ಪ್ರೀತ್ ಬ್ರಾರ್​ 14 ರನ್​ಗಳಿಸಿ ಅಜೇಯರಾಗುಳಿದರು.

ಮುಂಬೈ ಪರ ಬುಮ್ರಾ 24ಕ್ಕೆ 2, ಕೀರನ್ ಪೊಲಾರ್ಡ್​ 8ಕ್ಕೆ2, ಕೃನಾಲ್ ಮತ್ತು ರಾಹುಲ್ ಚಹರ್ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

See also  ಅಗ್ರ ಸ್ಥಾನಕ್ಕೇರಲು ಉತ್ತಮ ಪ್ರದರ್ಶನ ನೆರವಾಗುತ್ತದೆ: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು