NewsKarnataka
Saturday, October 23 2021

ಕ್ರೀಡೆ

2024ರ ಒಲಿಂಪಿಕ್ಸ್’ಗೂ ಅವರೇ ನನ್ನ ಕೋಚ್ ಆಗಿರಬೇಕು : ನೀರಜ್ ಚೋಪ್ರಾ

ಜರ್ಮನಿಯ ಕ್ಲಾಸ್ ಬಾರ್ಟೋನೀಜ್ ಅವರೇ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ತಮ್ಮ ಕೋಚ್ ಆಗಿರಬೇಕು ಎಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂಡಿಯಾ ಟುಡೇ ಜತೆ ಮಾತನಾಡಿದ ಅವರು, ಬಾರ್ಟೋನೀಜ್ ಅವರ ಕೋಚಿಂಗ್ ತುಂಬಾ ವಿಭಿನ್ನವಾಗಿದ್ದು, ಅವರೊಂದಿಗೆ ನನಗೆ ಉತ್ತಮ ಹೊಂದಾಣಿಕೆ ಇದೆ. ಹಲವು ಕೋಚ್ ಗಳು ಅಭ್ಯಾಸದ ವೇಳೆ ಕೇವಲ ತಂತ್ರಗಳನ್ನು ಕಲಿಸಲು ಮುಂದಾಗುತ್ತಾರೆ, ಆದರೆ ಬಾರ್ಟೋನೀಜ್ ಹಾಗಲ್ಲ. ಅವರ ಟ್ರೈನಿಂಗ್ ಅನ್ನು ನಾನು ಆನಂದಿಸುತ್ತೇನೆ ಎಂದರು.

2019ರಿಂದ ಬಾರ್ಟೋನೀಜ್ ಅವರಿಂದ ಚೋಪ್ರಾ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ವಿಶ್ವ ದಾಖಲೆ ನಿರ್ಮಿಸಿದ ಜಾವೆಲಿನ್ ಥ್ರೋ ಪಟು ಯುವೆ ಹಾನ್ ಅವರೂ ಕೂಡ ನೀರಜ್ ಗೆ ಟ್ರೈನ್ ಮಾಡಿದ್ದರು.

ಟೋಕಿಯೋ ಒಲಿಂಪಿಕ್ಸ್ ನ ಫಿನಾಲೆಗೂ ಮುನ್ನ ಕೇವಲ 2-3 ಬಾರಿ ಥ್ರೋ ವಾರ್ಮ್ ಅಪ್ ಮಾಡಿದ್ದೆ.  ಟೋಕಿಯೊದಲ್ಲಿ ಬಿಸಿಲಿನ ತಾಪವೂ ವಿಪರೀತವಾಗಿದ್ದ ಕಾರಣಕ್ಕೆ ಶಕ್ತಿಯನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಕೋಚ್ ಬಾರ್ಟೋನೀಜ್ ಸಲಹೆ ನೀಡಿದ್ದರು.

ಆದರೆ, ಬಹಳಷ್ಟು ಪ್ರತಿಸ್ಪರ್ಧಿಗಳು ಎರಡು ಗಂಟೆಗಳ ಮೊದಲೇ ಬಂದು ಅಭ್ಯಾಸ ಮಾಡಿದ್ದರು ಎಂದು ಚೋಪ್ರಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!