News Kannada
Sunday, March 26 2023

ಕ್ರೀಡೆ

ದುಬೈನಲ್ಲಿದ್ದಾರೆ ಭಾರತ ತಂಡದ ಮೆಂಟರ್​ ಆಗಿ ಮಹೇಂದ್ರ ಸಿಂಗ್ ಧೋನಿ

Photo Credit :

ಐಪಿಎಲ್​​ ಟೂರ್ನಿ ಮುಗಿದಿದ್ದು, ಇದೀಗ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೆಂಟರ್​ ಆಗಿ ದುಬೈನಲ್ಲಿದ್ದಾರೆ. ಐಪಿಎಲ್ ಮುಗಿದು ಎರಡು ದಿನದ ಬಳಿಕ ದುಬೈನಲ್ಲಿ ಬೀಡುಬಿಟ್ಟಿರುವ ಭಾರತ ತಂಡವನ್ನು ಅವರು ಭಾನುವಾರ ಸೇರಿಕೊಂಡರು. ಕಳೆದ ತಿಂಗಳು ಧೋನಿ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ನೇಮಕವಾಗಿದ್ದರು.

 

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಕಿಂಗ್ ಎಂ.ಎಸ್.ಧೋನಿಗೆ ಆತ್ಮೀಯ ಸ್ವಾಗತ, ಟೀಂ ಇಂಡಿಯಾದ ಹೊಸ ಪಾತ್ರಕ್ಕೆ ಮರಳಿದ್ದಾರೆ ಎಂದಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೋಚ್​ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಸೇರಿದಂತೆ ಇತರರು ಕಂಡುಬರುತ್ತಾರೆ.

ಧೋನಿ ಐಸಿಸಿ ಕ್ರಿಕೆಟ್​ನ ಮೂರು ಮಾದರಿಯ ಟೂರ್ನಿಗಳಲ್ಲಿ ಕಪ್ ಗೆದ್ದಿದ್ದಾರೆ. 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದಲ್ಲದೆ, 2010, 2011, 2018 ಮತ್ತು 2021ರ ಐಪಿಎಲ್​ ಪ್ರಶಸ್ತಿ ಗೆದ್ದು, ಯಶಸ್ವಿ ನಾಯಕ ಎನಿಸಿದ್ದಾರೆ.

See also  ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ಮೋದಿ ಆತಿಥ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು