NewsKarnataka
Tuesday, November 23 2021

ಕ್ರೀಡೆ

ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಆಸ್ಟ್ರೇಲಿಯಾ-ಲಂಕಾ ತಂಡಗಳು ಗುರುವಾರ ಮುಖಾಮುಖಿ

ದುಬೈ: ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಗುಂಪು ಒಂದರ ಸೂಪರ್‌ 12 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಲಯ ಮುಂದುವರಿಸುವ ಹಂಬಲದಲ್ಲಿದೆ.

ಮೊದಲ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿರುವ ಈ ಎರಡು ತಂಡಗಳು ಗುರುವಾರ ಮುಖಾಮುಖಿಯಾಗಲಿದ್ದು ಕುತೂಹಲ ಮೂಡಿಸಿದೆ.
ಎ ಗುಂಪಿನ ಮೂರೂ ಪಂದ್ಯಗಳಲ್ಲಿ ಜಯ ಗಳಿಸಿರುವ ಶ್ರೀಲಂಕಾ ಗುಂಪು ಒಂದರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲಿನ ಮೊತ್ತ ಬೆನ್ನತ್ತಿ ಜಯ ಗಳಿಸಿತ್ತು. ದಕ್ಷಿಣ ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಗೆದ್ದಿತ್ತು.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾಗಿದ್ದರು. ನಾಯಕ ಆಯರನ್ ಫಿಂಚ್ ಕೂಡ ಬೇಗ ಔಟಾಗಿದ್ದರು. ಸ್ಟೀವ್ ಸ್ಮಿತ್ ಲಯಕ್ಕೆ ಮರಳಿರುವುದು ತಂಡದಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಗಾಯದ ಸಮಸ್ಯೆಯಿಂದಾಗಿ ಹಿಂದಿನ ಪಂದ್ಯದಲ್ಲಿ ಆಡದೇ ಇದ್ದ ಶ್ರೀಲಂಕಾದ ಸ್ಪಿನ್ನರ್ ಮಹೀಶ್‌ ತೀಕ್ಷಣ ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಇದು ತಂಡದಲ್ಲಿ ಭರವಸೆ ತಂದಿದೆ. ಲೆಗ್ ಸ್ಪಿನ್ನರ್ ಆಲ್‌ರೌಂಡರ್ ವಾನಿಂದು ಹಸರಂಗ ಅವರ ಮೇಲೆಯೂ ತಂಡ ನಿರೀಕ್ಷೆ ಇದೆ.

ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ದಕ್ಷಿಣ ಆಫ್ರಿಕಾ ಎದುರು ಎರಡು ವಿಕೆಟ್ ಗಳಿಸಿದ್ದು ಮಿಷೆಲ್ ಸ್ಟಾರ್ಕ್ ಒಳಗೊಂಡ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಚರಿತ್ ಅಸಲಂಕ, ಪಥುಮ್ ನಿಸಾಂಕ ಮತ್ತು ಆವಿಷ್ಕಾ ಫರ್ನಾಂಡೊ ಅವರನ್ನು ಒಳಗೊಂಡ ಲಂಕಾ ಬ್ಯಾಟಿಂಗ್ ವಿಭಾಗಕ್ಕೆ ಹ್ಯಾಜಲ್‌ವುಡ್ ಮತ್ತು ಸ್ಟಾರ್ಕ್ ಸವಾಲಾಗಬಲ್ಲರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!