ಸ್ಪೇನ್ ನ ಹುಯೆಲ್ವಾದಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದಿಂದ ಪಿ.ವಿ. ಸಿಂಧು ನೇತೃತ್ವದಲ್ಲಿ 25 ಆಟಗಾರರು ಭಾಗವಹಿಸುತ್ತಿದ್ದಾರೆ.
ಭಾರತದ ಮೊದಲ ವಿಶ್ವ ಚಾಂಪಿಯನ್ ಎನಿಸಿಕೊಂಡಿರುವ ಪಿ.ವಿ. ಸಿಂಧು, ಮತ್ತೆ ಪ್ರಶಸ್ತಿ ಉಳಿಸಿಕೊಳ್ಳುವ ಭರದಲ್ಲಿ ಚಾಂಪಿಯನ್ ಶಿಪ್ ನಲ್ಲಿ ಕಣಕ್ಕಿಳಿದಿದ್ದಾರೆ.
ಮೊದಲ ಸುತ್ತಿನಲ್ಲಿ ಬೈ ಪಡೆದ ಸಿಂಧು, ಎರಡನೇ ಸುತ್ತಿನಲ್ಲಿ ಮಾರ್ಟೀನ ರೆಪಿಸ್ಕಾ ವಿರುದ್ದ ಸೆಣೆಸಾಡಲಿದ್ದಾರೆ. ಭಾರತದ ಸೈನಾ ನೆಹ್ವಾಲ್ ಗೆ ಗಾಯಗೊಂಡ ಹಿನ್ನೆಲೆ ಇದೆ ಮೊದಲ ಬಾರಿಗೆ ಚಾಂಪಿಯನ್ ಶಿಪ್ ನಿಂದ ಹೊರಗುಳಿದಿದ್ದಾರೆ.
ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಪಿವಿ ಸಿಂಧು, 2019ರಲ್ಲಿ ಬಾಸೆಲ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿಗೂ ಕೊರಳೊಡ್ಡಿದ್ದರು.