ಪಾಕಿಸ್ತಾನ ತಂಡದ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಮತ್ತು ಆತನ ಸ್ನೇಹಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಅಪಹರಣ, ಕಿರುಕುಳ ಹಾಗೂ ಬೆದರಿಕೆ ಆರೋಪದ ಅನ್ವಯ ಯಾಸಿರ್ ಶಾ ವಿರುದ್ಧ ಶಾಲಿಮಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾಸಿರ್ ಶಾ ಸ್ನೇಹಿತ ಫರ‍್ಹಾನ್ ನನಗೆ ಪಿಸ್ತೂಲ್ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಇದನ್ನು ವಿಡಿಯೋ ಮಾಡಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರದ ಬಗ್ಗೆ ಯಾರಿಗಾದರೂ ತಿಳಿಸಿದರೆ ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಕೃತ್ಯದಲ್ಲಿ ಯಾಸಿರ್ ಶಾ ನೆರವು ನೀಡಿದ್ದಾರೆ ಎಂದು ಬಾಲಕಿ ಹೇಳಿದ್ದಾರೆ.
ನಾನು ಯಾಸಿರ್ ಅವರಿಗೆ ಕರೆ ಮಾಡಿ, ನನಗೆ ಸಹಾಯ ಮಾಡಿ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದೆ ಅದಕ್ಕೆ ಅವರು ನಿನಗೆ ಒಂದು ಫ್ಲಾಟ್ ನೀಡುತ್ತೇನೆ. ಜೊತೆಗೆ 18 ವರ್ಷ ಪ್ರತಿ ತಿಂಗಳು ಇಂತಿಷ್ಟು ಹಣ ನೀಡುತ್ತೇನೆ ಇದನ್ನು ಇಲ್ಲಿಗೇ ಮುಗಿಸಿಬಿಡು ಎಂದು ಹೇಳಿದ್ದರು ಎಂದು ಬಾಲಕಿ ಹೇಳಿದ್ದಾಳೆ.