News Kannada
Tuesday, March 28 2023

ಕ್ರೀಡೆ

ಯುನೆಕ್ಸ್​ ಸನ್​ರೈಸ್​ ಇಂಡಿಯಾ ಓಪನ್​ ಟೂರ್ನಿ: ಕ್ವಾರ್ಟರ್​ ಫೈನಲ್ ಗೆ ಪಿ.ವಿ.ಸಿಂಧು, ಸೋತ ಸೈನಾ ನೆಹ್ವಾಲ್

PV Sindhu to pull out of World Badminton Championships
Photo Credit :

ಯುನೆಕ್ಸ್​ ಸನ್​ರೈಸ್​ ಇಂಡಿಯಾ ಓಪನ್​ ಟೂರ್ನಿಯ ಕ್ವಾರ್ಟರ್​ ಫೈನಲ್ ಗೆ ಪಿ.ವಿ.ಸಿಂಧು ಮತ್ತು ಹೆಚ್.​ಎಸ್.ಪ್ರಣಯ್​ ಪ್ರವೇಶಿಸಿದ್ದು, ಸೈನಾ ನೆಹ್ವಾಲ್​ 2ನೇ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ.

ಸೈನಾ 17-19, 9-21ರ ಅಂತರದಲ್ಲಿ ಭಾರತದವರೇ ಆದ 111 ಶ್ರೇಯಾಂಕದ ಮಾಳವಿಕಾ ಬನ್ಸೋದ್ ವಿರುದ್ಧ ಸೋಲೊಪ್ಪಿಕೊಂಡರು.

ಪಿ.ವಿ.ಸಿಂಧು ಭಾರತದ ಸಹ ಶಟ್ಲರ್​ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ತಮ್ಮ ಮುಂದಿನ ಸುತ್ತಿನಲ್ಲಿ ಆಶ್ಮಿತಾ ಚಹಿಲಾ ವಿರುದ್ಧ ಸೆಣಸಾಡಲಿದ್ದಾರೆ.

ಇತ್ತ ಆಶ್ಮಿತಾ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್​ನ ಯೆಲ್ಲೆ ಹೊಯಾಕ್ಸ್ ವಿರುದ್ಧ 21-17, 21-14ರ ಅಂತರದಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶ ಪಡೆದರು.

ಪುರುಷರ ವಿಭಾಗದಲ್ಲಿ ಮಿಥುನ್ ಮಂಜುನಾಥ್​ ಕೋವಿಡ್​ ಸೋಂಕು ಕಾರಣಕ್ಕೆ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಪ್ರಣಯ್​ ಸುಲಭವಾಗಿ ಕ್ವಾರ್ಟರ್ ಫೈನಲ್ಸ್‌ಗೆ ಎಂಟ್ರಿ ಕೊಟ್ಟರು.

See also  ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ. ವಿ. ಸಿಂಧು ಸೇರಿ ಭಾರತದ 25 ಆಟಗಾರರು ಭಾಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು