News Kannada
Friday, December 09 2022

ಕ್ರೀಡೆ

ಸೈಯದ್ ಮೋದಿ ಟೂರ್ನಮೆಂಟ್​​ನಲ್ಲಿ ಕ್ವಾರ್ಟರ್​ ಫೈನಲ್ಸ್​ಗೆ ಲಗ್ಗೆಯಿಟ್ಟ ಪಿವಿ ಸಿಂಧು

PV Sindhu to pull out of World Badminton Championships
Photo Credit :

ಸೈಯದ್ ಮೋದಿ ಇಂಟರ್​ನ್ಯಾಷನಲ್​ ಸೂಪರ್ 300 ಟೂರ್ನಮೆಂಟ್​​ನಲ್ಲಿ ಭಾರತದ ಪಿವಿ ಸಿಂಧು ಕ್ವಾರ್ಟರ್​ ಫೈನಲ್ಸ್​ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಹೆಚ್​ಎಸ್​ ಪ್ರಣಯ್ 8ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಸಿಂಧು, ಅಮೆರಿಕಾದ ಲಾರೆನ್ ಲ್ಯಾಮ್ ವಿರುದ್ಧ 21-16, 21-13ರ ಅಂತರದಲ್ಲಿ ಕೇವಲ 33 ನಿಮಿಷಗಳಲ್ಲೇ ಪಂದ್ಯವನ್ನು ಗೆದ್ದುಕೊಂಡರು.

ಸಿಂಧು 8ರ ಘಟ್ಟದ ಪಂದ್ಯದಲ್ಲಿ 6ನೇ ಶ್ರೇಯಾಂಕದ ಥಾಯ್ ಶಟ್ಲರ್​ ಸುಪನಿಡಾ ಕೆಟೆಥಾಂಗ್ ವಿರುದ್ಧ ಸೆಣಸಾಡಲಿದ್ದಾರೆ.
ಮಹಿಳೆಯರ ಇತರೆ ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ 21-9, 21-6ರಲ್ಲಿ ಸಾಯಿ ಉತ್ತೇಜಿತ ರಾವ್​ರನ್ನು, ಸಮಿಯಾ ಇಮಾದ್ ಫಾರೂಕಿ 21-6, 21-15ರಲ್ಲಿ ಕನಿಕಾ ಕನ್ವಾಲ್​ರನ್ನು, ಮಾಳವಿಕಾ 21-10, 21-8ರಲ್ಲಿ ಪ್ರೇರಣಾರನ್ನು ಮಣಿಸಿದರು.

5ನೇ ಶ್ರೇಯಾಂಕ ಪಡೆದುಕೊಂಡಿರುವ ಪ್ರಣಯ್​ ಭಾರತದವರೇ ಆದ ಪ್ರಿಯಾನ್ಶು ರಾಜಾವತ್​ ವಿರುದ್ಧ 21-11, 16-21, 21-18ರ ಕದನದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ಗೆ ಎಂಟ್ರಿಕೊಟ್ಟರು. ಮುಂದಿನ ಸುತ್ತಿನಲ್ಲಿ ಫ್ರಾನ್ಸ್​ನ ಅರ್ನಾಡ್ ಮೆರ್ಕಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

See also  ಇಂಡೋನೇಷಿಯಾ ಓಪನ್​​: ಸೆಮಿಫೈನಲ್ಸ್​ನಲ್ಲಿ ಪಿವಿ ಸಿಂಧು ಗೆ ಸೋಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು