ಟೀಂ ಇಂಡಿಯಾ ಮಾಜಿ ಆಟಗಾರ ಹರ್‌ಭಜನ್ ಸಿಂಗ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲೆಜೆಂಡ್ಸ್ ಕ್ರಿಕೆಟ್ ಕೂಟಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಮೊಹಮ್ಮದ್ ಕೈಫ್ ನಾಯಕತ್ವದ ಇಂಡಿಯಾ ಮಹಾರಾಜಾಸ್ ತಂಡ ಏಷ್ಯಾ ಲಯನ್ಸ್ ವಿರುದ್ಧ ಗೆಲುವುದು ಸಾಧಿಸಿತ್ತು.
ಇದೀಗ ತಂಡದ ಸ್ಟಾರ್ ಸ್ಪಿನ್ನರ್‌ಗೆ ಸೋಂಕು ತಗುಲಿರುವುದು ತಂಡಕ್ಕೆ ಆಘಾತವಾಗಿದೆ. ನಿನ್ನೆಯ ಪಂದ್ಯದಲ್ಲಿ ಹರ್‌ಭಜನ್ ಇರಲಿಲ್ಲ. ನನಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸೌಮ್ಯ ಲಕ್ಷಣಗಳಿದ್ದು, ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿ, ಸುರಕ್ಷಿತವಾಗಿರಿ ಎಂದು ಟರ್ಬನೇಟರ್ ಹೇಳಿದ್ದಾರೆ.