News Kannada
Thursday, March 23 2023

ಕ್ರೀಡೆ

ಪಾಟ್ನಾ ಪೈರೇಟ್ಸ್​ ಮತ್ತು ದಬಾಂಗ್ ಡೆಲ್ಲಿ​ ಫೈನಲ್ ನಲ್ಲಿ ಸೆಣಸಾಟ

Photo Credit :

ಬೆಂಗಳೂರು : ಪ್ರೊ ಕಬಡ್ಡಿ 8ನೇ ಆವೃತ್ತಿಯ ಅಂತಿಮ ಹಣಾಹಣಿಗೆ ಅಖಾಡ ಸಿದ್ಧಗೊಂಡಿದೆ. ನಿನ್ನೆ ನಡೆದ ಸೆಮಿಫೈನಲ್​ ಪಂದ್ಯಗಳಲ್ಲಿ ಯುಪಿ ಯೋಧಾ ವಿರುದ್ಧ 3 ಬಾರಿಯ ಚಾಂಪಿಯನ್​ ಪಾಟ್ನಾ ಪೈರೇಟ್ಸ್​ 38-27 ಅಂಕಗಳ ಅಂತರದಲ್ಲಿ ಗೆದ್ದರೆ, ದಬಾಂಗ್​ ಡೆಲ್ಲಿ ತಂಡ ಬೆಂಗಳೂರು ಬುಲ್ಸ್​ ವಿರುದ್ಧ 40-35 ಅಂತರದಲ್ಲಿ ಗೆದ್ದು ಫೈನಲ್​ ತಲುಪಿತು. ಪ್ರಶಸ್ತಿಗಾಗಿ ಪಾಟ್ನಾ ಪೈರೇಟ್ಸ್​ ಮತ್ತು ಡೆಲ್ಲಿ ದಬಾಂಗ್​ ಸೆಣಸಾಟ ನಡೆಸಲಿವೆ.

ಮೊದಲ ಸೆಮಿಫೈನಲ್ ಯುಪಿ ಯೋಧಾ ಮತ್ತು ಪಾಟ್ನಾ ಪೈರೇಟ್ಸ್ ಮಧ್ಯೆ ನಡೆದಿದ್ದು, ಪಂದ್ಯದಲ್ಲಿ ಪಾಟ್ನಾ ಪ್ರಾಬಲ್ಯಯುತ ಜಯ ಸಾಧಿಸಿತು. ಯುಪಿ ಯೋಧಾ ತಂಡದ ಸ್ಟಾರ್​ ಆಟಗಾರ ಪ್ರದೀಪ್​ ನರ್ವಾಲ್​ರನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ ಪಾಟ್ನಾ ಜಯದ ಕೇಕೆ ಹಾಕಿದೆ. ಪ್ರೊ ಕಬಡ್ಡಿ ಇತಿಹಾಸಲ್ಲಿಯೇ ಯಶಸ್ವಿ ರೈಡರ್​ ಆದ ಪ್ರದೀಪ್​ ನರ್ವಾಲ್​ ಪ್ರಮುಖ ಪಂದ್ಯದಲ್ಲಿ 16 ಬಾರಿ ರೈಡ್​ ಮಾಡಿದರೂ ಗಳಿಸಿದ್ದು ಮಾತ್ರ 4 ಪಾಯಿಂಟ್​. ಇದು ಯುಪಿ ಯೋಧಾಗೆ ಭಾರಿ ಹಿನ್ನಡೆ ಉಂಟು ಮಾಡಿತು.

ಯುಪಿ ಯೋಧಾ​ ಪರ ಶ್ರೀಕಾಂತ್​ ಜಾಧವ್​ 10 ಅಂಕ ಗಳಿಸಿದರೂ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೊಹಮ್ಮದ್ರೇಜಾ ಶಾದ್ಲೌಯಿ ಮತ್ತು ಸುನೀಲ್ ಅವರು ತಲಾ 5 ಅಂಕ ಪಡೆದು ಮಿಂಚಿದರೆ, ಇನ್ನೊಂದು ತುದಿಯಲ್ಲಿ ಪಾಟ್ನಾ ಪೈರೇಟ್ಸ್ ರೈಡರ್‌ಗಳಾದ ಸಚಿನ್ (7) ಮತ್ತು ಗುಮನ್ ಸಿಂಗ್ (8) ಯುಪಿ ಯೋಧಾಗೆ ಕಠಿಣ ಸವಾಲಾದರು.

ಅಂತಿಮವಾಗಿ ಯುಪಿ ಯೋಧಾ ತಂಡ ಪಾಟ್ನಾ ಪೈರೇಟ್ಸ್​ ವಿರುದ್ಧ 38-27 ಅಂತರದಲ್ಲಿ ಸೋಲು ಅನುಭವಿಸಿತು. ಇನ್ನು 3 ಬಾರಿಯ ಚಾಂಪಿಯನ್​ ಪಾಟ್ನಾ ತಂಡ 4 ನೇ ಬಾರಿಗೆ ಫೈನಲ್​ ತಲುಪಿತು.

ಶುಕ್ರವಾರ ಫೈನಲ್ ಪಂದ್ಯ: ಪಾಟ್ನಾ ಪೈರೇಟ್ಸ್​ ಮತ್ತು ಡೆಲ್ಲಿ ದಬಾಂಗ್​ ಮಧ್ಯೆ ಫೈನಲ್​ ಪಂದ್ಯ ಶುಕ್ರವಾರ ರಾತ್ರಿ 8.30ಕ್ಕೆ ನಡೆಯಲಿದೆ. ನಾಲ್ಕನೇ ಬಾರಿಗೆ ಪಾಟ್ನಾ ಚಾಂಪಿಯನ್​ ಆಗಲು ಹವಣಿಸುತ್ತಿದ್ದರೆ, ಡೆಲ್ಲಿ ದಬಾಂಗ್​ ತಂಡ ಸತತ ಎರಡನೇ ಬಾರಿ ಫೈನಲ್​ ಪ್ರವೇಶಿಸಿದ್ದು, ಮೊದಲ ಬಾರಿ ಚಾಂಪಿಯನ್​ ಆಗುವ ನಿರೀಕ್ಷೆ ಇಟ್ಟುಕೊಂಡಿದೆ.

See also  ಪ್ರೋ ಕಬಡ್ಡಿ: ಎಡವಿದ ಬೆಂಗಳೂರು ಬುಲ್ಸ್, ತಮಿಳ್ ತಲೈವಾಗೆ ಗೆಲುವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು