News Kannada
Tuesday, July 05 2022

ಕ್ರೀಡೆ

ಬ್ಯಾಡ್ಮಿಂಟನ್ ಟೂರ್ನಿ: ಅಶ್ವಿನಿ, ಸುಮೀತ್ ಪ್ರಧಾನ ಸುತ್ತಿಗೆ ಆಯ್ಕೆ - 1 min read

Photo Credit :

ಜಕಾರ್ತ: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸುಮೀತ್ ರೆಡ್ಡಿ ಜೋಡಿ ಇಲ್ಲಿ ಆರಂಭವಾದ ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿತು.

ಮಂಗಳವಾರ ನಡೆದ ಅರ್ಹತಾ ಹಂತದ ಪಂದ್ಯದಲ್ಲಿ ಭಾರತದ ಜೋಡಿ 17-21, 21-18, 21-14 ರಲ್ಲಿ ಜಪಾನ್‌ ಯುಜಿರೊ ನಿಶಿಕಾವ- ಸವೊರಿ ಒಜಾಕಿ ವಿರುದ್ಧ ಜಯ ಸಾಧಿಸಿತು.

ಮೊದಲ ಗೇಮ್‌ನಲ್ಲಿ ಸೋತರೂ, ಪುಟಿದೆದ್ದು ನಿಂತ ಅಶ್ವಿನಿ- ಸುಮೀತ್‌ 50 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಇಂಡೊನೇಷ್ಯದ ಹಾಫಿಜ್ ಫೈಜಲ್‌- ಸೆರೆನಾ ಕನಿ ವಿರುದ್ದ ಪೈಪೋಟಿ ನಡೆಸುವರು.

ಆದರೆ ಅಶ್ವಿನಿ ಅವರು ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದರು. ಅಶ್ವಿನಿ- ಸಿಕ್ಕಿ ರೆಡ್ಡಿ ಜೋಡಿ 18-21 9-21ರಲ್ಲಿ ಇಂಡೊನೇಷ್ಯದ ಮೆಲಿಸಾ ಪುಸ್ಪಿತಾ ಮತ್ತು ರಚೆಲ್ ಅಲೆಸ್ಯಾ ಕೈಯಲ್ಲಿ ಪರಾಭವಗೊಂಡಿತು.

ಆಕರ್ಷಿಗೆ ಜಯ: ಯುವ ಪ್ರತಿಭೆ ಆಕರ್ಷಿ ಕಶ್ಯಪ್‌ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿದರು. ಅರ್ಹತಾ ಹಂತದ ಪಂದ್ಯದಲ್ಲಿ ಅವರು 13-21 21-9 21-9 ರಲ್ಲಿ ಥಾಯ್ಲೆಂಡ್‌ನ ಸಿರದ ರೂಂಗ್ಪಿಬೂನ್‌ಸೊಪಿತ್‌ ಅವರನ್ನು ಪರಾಭವಗೊಳಿಸಿದರು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೀವೆನ್‌ ಜಾಂಗ್‌ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶುಭಾಂಕರ್‌ ದೇ, ಪ್ರಧಾನ ಹಂತ ಪ್ರವೇಶಿಸಲು ವಿಫಲರಾದರು. ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು 16-21 21-9 14-21 ರಲ್ಲಿ ಮಲೇಷ್ಯದ ಸೂಂಗ್ ಜೂ ವೆನ್‌ ಎದುರು ಸೋತರು. ಸಿಮ್ರಾನ್‌ ಸಿಂಘಿ ಮತ್ತು ರಿತಿಕಾ ಥಾಕರ್‌ ಅವರು ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ 10-21 11-21 ರಲ್ಲಿ ಕೊರಿಯದ ಲೀ ಸೊ ಹೀ- ಶಿನ್‌ ಸುಂಗ್‌ ಚಾನ್‌ ಎದುರು ಸೋಲು ಅನುಭವಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮನು ಅತ್ರಿ- ಸುಮೀತ್‌ ಜೋಡಿ 21-19 11-21 8-21 ರಲ್ಲಿ ಪ್ರಮುದ್ಯಾ ಕುಸುಮವರ್ದನ- ಯೆರೆಮಿಯಾ ಯಾಕೊಬ್‌ ಎದುರು ಪರಾಭವಗೊಂಡಿತು.

See also  ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದ ಎಡಗೈ ವೇಗಿ ಇರ್ಫಾನ್ ಪಠಾಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು