News Kannada
Wednesday, March 29 2023

ಕ್ರೀಡೆ

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್: ಲಾಂಗ್​​ ಜಂಪ್​​ನಲ್ಲಿ ಮುರಳಿ ಶ್ರೀಶಂಕರ್​​ ಫೈನಲ್​ಗೆ

World Athletics Championships: India's Murali Sreeshankar advances to men's long jump final
Photo Credit : Twitter

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​​ನಲ್ಲಿ ಭಾರತದ ಅನೇಕ ಅಥ್ಲೆಟ್ಸ್​​ಗಳು ಭಾಗಿಯಾಗಿದ್ದು, ಇದೀಗ ಪುರುಷರ ಲಾಂಗ್​​ ಜಂಪ್​​ನಲ್ಲಿ ಭಾರತದ ಮುರಳಿ ಶ್ರೀಶಂಕರ್​​ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ 8 ಮೀಟರ್​ ಜಿಗಿಯುವ ಮೂಲಕ ಕೇರಳದ 23 ವರ್ಷದ ಶ್ರೀಶಂಕರ್​​ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಸುತ್ತಿನಲ್ಲಿ ಜಪಾನ್‌ನ ಯುಕಿ ಹಶಿಯೋಕಾ (8.18 ಮೀ) ಮತ್ತು ಯುಎಸ್‌ಎಯ ಮಾರ್ಕ್ವಿಸ್ ಡೆಂಡಿ (8.16 ಮೀ) ಜಿಗಿದಿದ್ದಾರೆ.

ಈ ಹಿಂದೆ ಭಾರತದ ಅಂಜು ಬಾಬಿ ಜಾರ್ಜ್​ ಲಾಂಗ್​ ಜಂಪ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದರು. ಇವರು 2003ರಲ್ಲಿ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಮತ್ತೊಂದು ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್​​ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ವಿಶ್ವ ಅಥ್ಲೆಟಿಕ್ಸ್​​ ಚಾಂಪಿಯನ್​ಶಿಪ್​ನಲ್ಲಿ ಜಾವಲಿನ್​ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಭಾಗಿಯಾಗಿದ್ದು, ಚಿನ್ನಕ್ಕೆ ಮುತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ.

See also    ಬಂಟ್ವಾಳದಲ್ಲಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು