News Kannada
Wednesday, September 28 2022

ಕ್ರೀಡೆ

ಇಂಗ್ಲೆಂಡ್‌: ಲೀಸೆಸ್ಟರ್‌ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಇನ್ನು ಮುಂದೆ ಭಾರತದ ಕ್ರಿಕೆಟಿಗನ ಹೆಸರು! - 1 min read

England: Leicester Cricket Stadium to be named after Indian cricketer
Photo Credit : Wikimedia

ಇಂಗ್ಲೆಂಡ್‌ : ಸುನೀಲ್‌ ಗವಾಸ್ಕರ್‌ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು. ಲಿಟ್ಲ್‌ ಮಾಸ್ಟರ್‌ ಎಂದೇ ಪ್ರಖ್ಯಾತರಾದ ಭಾರತದ ಮಾಜಿ ನಾಯಕ ಗವಾಸ್ಕರ್‌ ಹಲವು ದಾಖಲೆಗಳ ಒಡೆಯ.

ಕ್ರಿಕೆಟ್‌ ಅಷ್ಟೇನು ಜನಪ್ರಿಯವಾಗಿಲ್ಲದ ಕಾಲದಲ್ಲಿ ಆಡಿ ಕ್ರಿಕೆಟ್‌ ಕ್ರೇಜ್‌ ಅನ್ನು ಮತ್ತೊಂದು ಮಜಲಿಗೆ ಕೊಂಡೊಯ್ದರು. ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರನ್ನು ಗವಾಸ್ಕರ್‌ ಗೆ ಹೋಲಿಸುವುದಿದೆ. ಗವಾಸ್ಕರ್‌ ಆಟವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ.

ಕ್ರಿಕೆಟ್‌ ಗೆ ಗವಾಸ್ಕರ್‌ ನಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅತ್ಯುನ್ನತ ಗೌರವವೊಂದನ್ನು ಸಮರ್ಪಿಸಲಾಗುತ್ತಿದೆ. ಇಂಗ್ಲೆಂಡ್‌ ನಲ್ಲಿ ಪ್ರಸಿದ್ಧವಾದ ಕ್ರಿಕೆಟ್‌ ಕ್ರೀಡಾಂಗಣವೊಂದು ಇನ್ನು ಮುಂದೆ ʼಸುನೀಲ್‌ ಗವಾಸ್ಕರ್‌ ಸ್ಟೇಡಿಯಂʼ ಎಂದು ಕರೆಸಿಕೊಳ್ಳಲಿದೆ.

ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ಕ್ರಿಕೆಟ್ ಮೈದಾನಕ್ಕೆ ಭಾರತದ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅವರ ಹೆಸರಿಡಲಾಗುತ್ತಿದೆ. ಈ ಕ್ರೀಡಾಂಗಣ ಇಷ್ಟು ದಿನಗಳ ಕಾಲ ಲೀಸೆಸ್ಟರ್‌ ಕ್ರೀಡಾಂಗಣವೆಂದು ಕರೆಸಿಕೊಳ್ಳುತ್ತಿತ್ತು. ಇದೀಗ ಆ ಹೆಸರನ್ನು ಬದಲಿಸಿ ಭಾರತೀಯ ಕ್ರಿಕೆಟ್‌ ದಂತಕಥೆಯ ಹೆಸರನ್ನು ಮರುನಾಮಕರಣ ಮಾಡಲಾಗುತ್ತಿದೆ.

ತನಗೆ ಸಲ್ಲಿಸಲಾದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿರುವ ಗವಾಸ್ಕರ್‌, “ಲೀಸೆಸ್ಟರ್ ಅಪ್ಪಟ ಕ್ರಿಕೆಟ್‌ ಬೆಂಬಲಿಗರನ್ನು ಹೊಂದಿರುವ ನಗರವಾಗಿದೆ, ವಿಶೇಷವಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಿಜಕ್ಕೂ ನನಗೆ ಸಂದ ದೊಡ್ಡ ಗೌರವವಾಗಿದೆ” ಎಂದು ಹೇಳಿದ್ದಾರೆ.

ಕ್ರೀಡಾಂಗಣಕ್ಕೆ ಗವಾಸ್ಕರ್‌ ಹೆಸರಿಡುವ ಹಿಂದೆ ಭಾರತೀಯ ಮೂಲದ ಯುಕೆ ಸಂಸದ ಕೀತ್ ವಾಜ್ ಅವರ ಅಪಾರ ಪರಿಶ್ರಮವಿದೆ.  ʼಮೈದಾನಕ್ಕೆ ಗವಾಸ್ಕರ್ ಹೆಸರನ್ನು ಇಡಲು ತೀರ್ಮಾನವಾದ ವಿಚಾರ ರೋಮಾಂಚನ ತಂದಿದೆʼ. ಅವರು ಕೇವಲ “ಲಿಟಲ್ ಮಾಸ್ಟರ್” ಅಲ್ಲ; ಅವರು ಆಟದ ಮಹಾನ್ ಮಾಸ್ಟರ್ʼ ಎಂದು ಕೀಚ್‌ ಸಂಭ್ರಮ ಹಂಚಿಕೊಂಡಿದ್ದಾರೆ.

 

See also  ಆಸ್ಟ್ರೇಲಿಯಾ ಪುರುಷ ತಂಡದ ಹೆಡ್‌ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು