News Kannada
Thursday, February 02 2023

ಕ್ರೀಡೆ

ಉಡುಪಿ: ಪಿಪಿಸಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ ಆರಂಭ

National level volleyball tournament begins at PPC College, Udupi
Photo Credit : By Author

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಇಂದಿನಿಂದ ಐದು ದಿನಗಳ ಕಾಲ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿವಿ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ದಿನದ ಮೊದಲ ಪಂದ್ಯದಲ್ಲಿ ಹರಿಯಾಣದ ಕುರುಕ್ಷೇತ್ರ ವಿವಿ ಹಾಗೂ ಕೊಲ್ಕತ್ತಾ ಅದಮಾಸ್ ವಿವಿ ತಂಡಗಳು ಸೆಣಸಾಟ ನಡೆಸಿದವು.

ಕುರುಕ್ಷೇತ್ರ ವಿವಿ ತಂಡವು ಮೂರು‌ ನೇರ ಸೆಟ್ ಗಳ‌ ಮೂಲಕ ಅದಮಾಸ್ ವಿವಿ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ದಿನದ ಎರಡನೇ ಪಂದ್ಯದಲ್ಲಿ ದಕ್ಷಿಣ ವಲಯದ ಮದ್ರಾಸ್ ವಿವಿ ಚೆನ್ನೈ ತಂಡವು ಜೈಪುರದ ರಾಜಸ್ಥಾನ ವಿವಿ ತಂಡವನ್ನು 3-1 ಸೆಟ್‌ಗಳಿಂದ ಸೋಲಿಸಿತು.

ಈ ಟೂರ್ನಿಯಲ್ಲಿ ನಾಲ್ಕು ವಲಯಗಳಿಂದ ಅಗ್ರಸ್ಥಾನ ಪಡೆದ ತಲಾ ನಾಲ್ಕು ತಂಡಗಳಂತೆ ಒಟ್ಟು ಹದಿನಾರು ತಂಡಗಳು ರಾಷ್ಟ್ರೀಯ ವಿವಿ ಚಾಂಪಿಯನ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಹಾಲಿ ರಾಷ್ಟ್ರೀಯ ಚಾಂಪಿಯನ್ ಕೇರಳದ ಕಲ್ಲಿಕೋಟೆ ವಿವಿ ಹಾಗೂ ರನ್ನರ್ ಅಪ್ ಹರಿಯಾಣದ ಕುರುಕ್ಷೇತ್ರ ವಿವಿಗಳು ಈ ಬಾರಿಯೂ ಅಂತರ ವಲಯ ಸ್ಪರ್ಧೆಗೆ ತೇರ್ಗಡೆಗೊಂಡಿವೆ. ಭಾಗವಹಿಸುವ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

See also  ಗಮನಸೆಳೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು