ಜೆರುಸಲೇಂ, ಫೆ.24: ನಿಷೇಧಿತ ವಸ್ತುಗಳ ಸೇವನೆ ಹಿನ್ನೆಲೆ ಇಸ್ರೇಲಿ ಸೂಪರ್ ಲೀಗ್ ನ ಹಪೋಲ್ ಹೈಫಾ ಪರ ಆಡುತ್ತಿರುವ ಮಾಜಿ ಎನ್ ಬಿಎ ಆಟಗಾರ ಕದೀಮ್ ಅಲೆನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬ್ಯಾಸ್ಕೆಟ್ಬಾಲ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 25 ರಂದು ಇಟಲಿಯಲ್ಲಿ ಬುಡಿವೆಲ್ನಿಕ್ ಕೈವ್ ವಿರುದ್ಧದ ಹೈಫಾದ ಯುರೋಪ್ ಕಪ್ ಪಂದ್ಯದ ನಂತರ ತೆಗೆದುಕೊಂಡ ಪರೀಕ್ಷಾ ಮಾದರಿಗಳಲ್ಲಿ ನಿಷೇಧಿತ ವಸ್ತುಗಳು ಕಂಡುಬಂದಿವೆ ಎಂದು ಕ್ಲಬ್ ಗೆ ಅಂತರರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಫೆಡರೇಶನ್ (ಎಫ್ಐಬಿಎ) ಸಂದೇಶ ಕಳುಹಿಸಿದೆ.
ಆದ್ದರಿಂದ, ಮರುಪರೀಕ್ಷೆಯ ಫಲಿತಾಂಶಗಳನ್ನು ಪಡೆಯುವವರೆಗೆ ಅಲೆನ್ ಅವರನ್ನು ಅಮಾನತುಗೊಳಿಸುವಂತೆ ಎಫ್ಐಬಿಎ ಕ್ಲಬ್ ಗೆ ಸೂಚನೆ ನೀಡಿದೆ ಎಂದು ಕ್ಸಿನ್ಹುವಾ ವರದಿ ತಿಳಿಸಿದೆ.