ಮುಂಬೈ: ಸದಾ ಜಾಲಿ ಮೂಡ್ ನಲ್ಲಿರುವ ಭಾಗದ ವನಿತಾ ಕ್ರಿಕೆಟಿಗರಲ್ಲಿ ಜೆಮಿಮಾ ರೋಡಿಗಸ್ ಅವರಿಗೆ ಅಗ್ರಸ್ಥಾನ, ಹಾಡು, ನೃತ್ಯ, ರೀಲ್ಸ್ ಮೂಲಕ ಜೆಮಿಮಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಕ್ರಿಕೆಟ್ ಪಂದ್ಯದ ವೇಳೆ ಬೌಂಡರಿ ಲೈನ್‌ನಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ಮೋಡಿಗೊಳ ಸಿದ್ದಾರೆ. ಇದರ ವೀಡಿಯೋ ವೈರಲ್ ಆಗಿದೆ.
ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿಯನ್ನು ಪ್ರತಿ ನಿಧಿಸುವ ಜೆಮಿಮಾ, ಭಾನುವಾರ ಆರ್ ಬಿ ಎದುರಿನ ಪಂದ್ಯದ ವೇಳೆ ಅಂಗಳದಲ್ಲೇ ಡ್ಯಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಿದರು. ಇದರಲ್ಲಿ ಭಾಂಗ್ರಾ ನೃತ್ಯವೂ ಸೇರಿತ್ತು! ಇದೇ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಅವರು ವೀಕ್ಷಕರೊಬ್ಬರಿಗೆ ನೀರು ನೀಡುವ ಮೂಲಕವೂ ಸುದ್ದಿಯಾದರು.