ಮಹಿಳಾ ಟಿ-20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಸವಾಲು

ಮಹಿಳಾ ಟಿ-20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಸವಾಲು

HSA   ¦    Feb 19, 2020 07:28:52 PM (IST)
ಮಹಿಳಾ ಟಿ-20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಸವಾಲು

ಸಿಡ್ನಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಶುಕ್ರವಾರ ಭಾರತದ ಮಹಿಳೆಯರು ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.

ಐಸಿಸಿ ಟಿ20 ಅಂತಾರಾಷ್ಟ್ರೀಯ ರ‍್ಯಾಂಕಿಂಗ್ ನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ ಮತ್ತು ಆಸ್ಟ್ರೇಲಿಯಾವು ಅಗ್ರಸ್ಥಾನದಲ್ಲಿದೆ.

ತಂಡವು ಈ ಟೂರ್ನಿಯಲ್ಲಿ ಸ್ವಲ್ಪ ಮಟ್ಟದ ಒತ್ತಡ ಎದುರಿಸುತ್ತಿದೆ ಮತ್ತು ಇದೇ ವೇಳೆ ಎದುರಾಳಿಗಳನ್ನು ಕೂಡ ಒತ್ತಡದಲ್ಲಿ ಹಾಕಲು ತಯಾರಾಗಿದ್ದೇವೆ ಎಂದು ಸಿಡ್ನಿ ಒಪೆರಾ ಹೌಸ್ ಗೆ ಎರಡು ತಂಡಗಳು ಬಂದ ಬಳಿಕ ಹರ್ಮನ್ ಪ್ರೀತ್ ಕೌರ್ ಹೇಳಿದರು.

ನಾವು ಮೊದಲು ಪಂದ್ಯದಲ್ಲಿ ಆಡಲು ತುಂಬಾ ಕಾತರಿಸಿದ್ದೇವೆ ಮತ್ತು ಇದರಲ್ಲಿ ಧನಾತ್ಮಕವಾಗಿರುವುದನ್ನು ಎದುರು ನೋಡುತ್ತಿದ್ದೇವೆ. ಯಾವುದೇ ತಂಡದ ಮೇಲೆ ಒತ್ತಡ ಹೇರಲು ನಮ್ಮ ತಂಡವು ಸಮರ್ಥವಾಗಿದೆ ಎಂದು ಹರ್ಮನ್ ಪ್ರೀತ್ ಕೌರ್ ತಿಳಿಸಿದರು.