ಮೈದಾನದಲ್ಲೇ ಅಂಪಾಯರ್ ಹೃದಯಾಘಾತದಿಂದ ಸಾವು

ಮೈದಾನದಲ್ಲೇ ಅಂಪಾಯರ್ ಹೃದಯಾಘಾತದಿಂದ ಸಾವು

HSA   ¦    Oct 08, 2019 03:16:51 PM (IST)
ಮೈದಾನದಲ್ಲೇ ಅಂಪಾಯರ್ ಹೃದಯಾಘಾತದಿಂದ ಸಾವು

ಇಸ್ಲಾಮಾಬಾದ್: ಮೈದಾನದಲ್ಲಿ ಅಂಪಾಯರ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಯು ಸೋಮವಾರ ಪಾಕಿಸ್ತಾನದಲ್ಲಿ ನಡೆದಿದೆ.

ಸ್ಥಳೀಯ ಪಂದ್ಯವೊಂದರಲ್ಲಿ ಅಂಪಾಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಸೀಂ ಶೇಖ್ ಎಂಬವರು ಮೃತಪಟ್ಟವರು. ತನ್ನ ಅಂಪಾಯರಿಂಗ್ ನಿಂದಾಗಿ ಜನಪ್ರಿಯರಾಗಿದ್ದ ನಸೀಂ ಶೇಖ್ ಅವರು ಸೋಮವಾರ ಪಂದ್ಯವೊಂದರ ವೇಳೆ ಕಾರ್ಯನಿರ್ವಹಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು.

ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.