ವಿಶ್ವಕಪ್ ಗೆ ದಶಕದ ಸಂಭ್ರಮ

ವಿಶ್ವಕಪ್ ಗೆ ದಶಕದ ಸಂಭ್ರಮ

Jayashree aryapu   ¦    Apr 02, 2021 05:31:37 PM (IST)
ವಿಶ್ವಕಪ್ ಗೆ ದಶಕದ ಸಂಭ್ರಮ

ಹೊಸದೆಹಲಿ: 10 ವರ್ಷಗಳ ಹಿಂದೆ ಅಂದಿನ ಈ ದಿನದಂದು (2011 ಏಪ್ರಿಲ್ 2) ಭಾರತ ಕ್ರಿಕೆಟ್ ತಂಡವು 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು.

2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ, ಮಹೇಂದ್ರ ಸಿಂಗ್ ಧೋನಿ ಬಳಗವು ವಿಶ್ವಕಪ್ ಕಿರೀಟವನ್ನು ಎತ್ತಿ ಹಿಡಿದಿತ್ತು.

ಈ ಸ್ಮರಣೀಯ ನೆನಪುಗಳಿಗೆ ಮತ್ತೊಮ್ಮೆ ತಾಜಾತನ ತುಂಬಿರುವ ವಿಶ್ವಕಪ್ ವಿಜೇತ ತಂಡದ ಸದಸ್ಯರು ಟ್ವೀಟ್ ಮಾಡಿ ಸಂತಸ ಸೂಚಿಸಿದ್ದಾರೆ.

ವಿಶ್ವಕಪ್ ತಂಡದ ಸದಸ್ಯ ಹಾಗೂ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ವಿಶ್ವಕಪ್ ಗೆದ್ದ ಸಂದರ್ಭವನ್ನು 'ಜೀವಮಾನದ ಕ್ಷಣ' ಎಂದು ಬಿಂಬಿಸಿದ್ದಾರೆ.