ಕನಿಷ್ಠ ಮೂರು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತೇನೆ: ಕೊಹ್ಲಿ

ಕನಿಷ್ಠ ಮೂರು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತೇನೆ: ಕೊಹ್ಲಿ

HSA   ¦    Feb 19, 2020 03:02:24 PM (IST)
ಕನಿಷ್ಠ ಮೂರು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತೇನೆ: ಕೊಹ್ಲಿ

ವೆಲ್ಲಿಂಗ್ಟನ್: ಮುಂದಿನ ಮೂರು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟಿನಲ್ಲಿ ಆಡುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಬ್ಯಾಟಿಂಗ್ ಮೇಲೆ ಹೆಚ್ಚು ಹೊರೆ ಬೀಳುತ್ತಿರುವ ಕಾರಣದಿಂದಾಗಿ ಒಂದು ಮಾದರಿ ಕ್ರಿಕೆಟ್ ತ್ಯಜಿಸುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ತಂಡದ ಆಧಾರ ಸ್ತಂಭವಾಗಿದ್ದಾರೆ. ಅವರು ಇದುವರೆಗೆ 84 ಟೆಸ್ಟ್, 248 ಏಕದಿನ ಮತ್ತು 82 ಟಿ-20 ಪಂದ್ಯಗಳನ್ನು ಆಡಿರುವರು.

ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರನಾಗಿರುವಂತಹ ಕೊಹ್ಲಿ ಯುವ ಆಟಗಾರರಿಗೆ ಜಾಗ ಬಿಟ್ಟುಕೊಡಬೇಕಾದ ಕಾರಣದಿಂದಾಗಿ ಮುಂದಿನ ಮೂರು ವರ್ಷಗಳ ಕಾಲ ತಾನು ಟೆಸ್ಟ್, ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಆಡುವುದಾಗಿ ತಿಳಿಸಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಭಾರತ ತಂಡವು ಟಿ-20 ಹಾಗೂ ಏಕದಿನಗಳಲ್ಲಿ ದೊಡ್ಡ ಸಾಧನೆ ಮಾಡಲಿದ್ದು, ಹೀಗಾಗಿ ತಾನು ಕನಿಷ್ಠ ಮೂರು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟಿನಲ್ಲಿ ಆಡುವುದಾಗಿ ಕೊಹ್ಲಿ ಹೇಳಿದ್ದಾರೆ.